ಲಕ್ನೋ: ಉತ್ತರ ಪ್ರದೇಶ ಚುನಾವಣೆ ಹತ್ತಿರವಿರುವಾಗಲೇ ಪಕ್ಷದಲ್ಲಿ ಬದಲಾವಣೆ ಪರ್ವ ಶುರುವಾಗಿದೆ. ಬಿಜೆಪಿಯಿಂದ ಒಬ್ಬರು ಸಚಿವರು ಸೇರಿದಂತೆ ನಾಲ್ಕು ಜನ ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಹಾಗೂ ಸಿಎಂ ಯೋಗಿ ಆದಿತ್ಯಾನಾಥ್ ಗೆ ಬಿಗ್ ಶಾಕ್ ನೀಡಿದ್ದಾರೆ.
ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸ್ವಾಮಿ ಪ್ರಸಾದ್, ಬಿಜೆಪಿ ತೊರೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ಭಿನ್ನ ಸಿದ್ಧಾಂತದ ಹೊರತಾಗಿಯೂ ಯೋಗಿ ಆದಿತ್ಯಾನಾಥ್ ಸಂಪುಟದಲ್ಲಿ ನಾನು ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ್ದೇನೆ. ಆದರೆ ದಲಿತರು, ರೈತರು, ನಿರುದ್ಯೋಗಿಗಳು, ಒಬಿಸಿಗಳು, ಡಣ್ಣ ಉದ್ಯಮಿಗಳ ಮೇಲೆ ಆಗುತ್ತಿರುವ ತೀವ್ರ ದಬ್ಬಾಳಿಕೆಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ಸ್ವಾಮಿ ಪ್ರಸಾದ್ 2016 ರಲ್ಲಿ ಮಾಯಾವತಿಯವರ ಬಿಎಸ್ಪಿ ಪಕ್ಷ ತೊರೆದು, ಬಿಜೆಪಿ ಸೇರಿದ್ದರು. ಸ್ವಾಮಿ ಪ್ರಸಾದ್ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇದೀಗ ಬದಲಾವಣೆ ಬಯಸಿದ್ದು ಎಸ್ಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಸ್ವಾಮಿ ಪ್ರಸಾದ್ ಜೊತೆಗೆ ಆಪ್ತರೆಂದೆ ಗುರುತಿಸಿಕೊಂಡಿರುವ ರೋಷನ್ ಲಾ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಾಗ್ವತಿ ಸಾಗರ್, ವಿನಯ್ ಶಂಕ್ಯಾ ಸಹ ಪಕ್ಷ ತೊರೆಯುತ್ತಿದ್ದಾರೆ.