ಬೆಂಗಳೂರು: ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನರಾರಚನೆಯಾಗುತ್ತೆ, ಅದರಲ್ಲಿ ನಮಗೂ ಸ್ಥಾನ ಸಿಗುತ್ತೆ ಅಂತ ಬಯಸುತ್ತಿರುವವರು ಹಲವರು. ಸಚಿವ ಸ್ಥಾನದ ಆಕಾಂಕ್ಷೆಯಲ್ಲಿಯೇ ಹಲವರಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ನಾಯಕ ಸಮುದಾಯಕ್ಕೂ ಒಂದು ಸಚಿವ ಸ್ಥಾನ ನೀಡ್ತೇವೆ ಎಂಬ ಭರವಸೆಯನ್ನ ನೀಡಿದ್ದಾರೆ.
ಇಂದು ವಾಲ್ಮೀಕಿ ಜಯಂತಿಯ ಪ್ರಯುಕ್ತ ಶಾಸಕರ ಭವನದಲ್ಲಿ ವಾಲ್ಮೀಕಿ ಜಯಂತಿಯನ್ನ ಆಚರಣೆ ಮಾಡಲಾಗಿದೆ. ವಾಲ್ಮೀಕಿ ಅವರು ನಾವೆಲ್ಲಾ ಕಂಡಂತ ಅಪರೂಪದ ಸಾಹಿತಿ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ರಾಮಾಯಣವನ್ನ ಇಡೀ ದೇಶಕ್ಕೆ ಪರಿಚಯಿಸುವ ಕೆಲಸವನ್ನ ವಾಲ್ಮೀಕಿ ಮಾಡಿದ್ದಾರೆ ಎಂದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಾಯಕ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿ, ಮುಂದೆ ಸಚಿವ ಸಂಪುಟ ಪುನರ್ ರಚನೆಯ ವೇಳೆ ಅವರಿಗೂ ಸಚಿವ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಸೇರುವುದಕ್ಕೆ ಒಂದಷ್ಟು ಜನ ಕಾಯ್ತಿದ್ದಾರೆ. ಸಿಎಂ ಆಕಾಂಕ್ಷಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಕಾಯ್ತಾ ಇದ್ದಾರೆ. ನವೆಂಬರ್ ತಿಂಗಳಲ್ಲಿ ಎರಡೂ ವರ್ಷ ಪೂರೈಸುವ ಸರ್ಕಾರದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬ ಕುತೂಹಲವೂ ಜನರಲ್ಲಿ ಇದೆ. ರಾಜಣ್ಣ ಹೇಳಿದಂತೆ ಕ್ರಾಂತಿ ನಡೆದು ಸಿಎಂ ಬದಲಾಗ್ತಾರಾ..? ಎಂಬ ಪ್ರಶ್ನೆಯೂ ಎಲ್ಲರಲ್ಲೂ ಇದೆ. ಇದರ ನಡುವೆ ಏನೇ ಇರಲಿ ನಾಯಕ ಸಮುದಾಯಕ್ಕೆ ಸಚಿವ ಸ್ಥಾನ ಸಿಗುವ ಭರವಸೆ ನೀಡಿದ್ದಕ್ಕೆ ನಾಯಕ ಸಮುದಾಯ ಫುಲಗ ಖುಷಿಯಾಗಿದೆ.






