ನ್ಯಾಯಾಧೀಶರನ್ನೇ ಜೈಲಿಗೆ ಕರೆದ ದರ್ಶನ್ : ಕಾರಣವೇನು ಗೊತ್ತಾ..?

1 Min Read

 

ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎರಡನೇ ಬಾರಿಗೆ ಜೈಲು ಸೇರಿದ್ದಾರೆ. ಜೈಲಿನಲ್ಲಿ ಕಾಲ ಕಳೆಯುವುದಕ್ಕೆ ಕಷ್ಟಕರವಾಗುತ್ತಿದೆ. ಮೂಲಭೂತ ಸೌಲಭ್ಯಗಳಿಲ್ಲದೆ ಒದ್ದಾಡುತ್ತಿದ್ದಾರೆ ಎಂಬ ಆರೋಪವಿದೆ. ಮೂಲಭೂತ ಸೌಲಭ್ಯಗಳು ಬೇಕು ಅಂತ ಅರ್ಜಿಯನ್ನ ಸಲ್ಲಿಕೆ ಮಾಡಿದ್ದಾರೆ. ಕೋರ್ಟ್ ಅನುಮತಿ ನೀಡಿದರು ಸೌಲಭ್ಯ ಕೊಟ್ಟಿಲ್ಲ ಎಂಬ ಆರೋಪವನ್ನು ದರ್ಶನ್ ಅವರು ಮಾಡ್ತಾನೆ ಇದ್ದಾರೆ. ಇದೀಗ ಆ ಸಂಬಂಧ 3ನೇ ಅರ್ಜಿ ಸಲ್ಲಿಕೆಯಾಗಿದೆ. ಕೋರ್ಟ್ ಹೇಳಿದರು ನಮಗೆ ಯಾವುದೇ ಮೂಲಭೂತ ಸೌಕರ್ಯ ನೀಡುತ್ತಿಲ್ಲ. ಬೇಕಾದರೆ ನೀವೇ ಬಂದು ನೋಡಿ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್ 9ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ. ಜೈಲಿನ ಅಧಿಕಾರಿಗಳು ತನಗೆ ನೀಡಿರುವ ಸೌಲಭ್ಯಗಳನ್ನು ಖುದ್ದು ಜಡ್ಜ್ ಭೇಟಿ ನೀಡಿ ಪರಿಶೀಲಿಸಬೇಕೆಂದು ನಟ ದರ್ಶನ್ ಮನವಿ ಮಾಡಿದ್ದಾರೆ.

ಸಿಆರ್ಪಿಸಿ ಸೆಕ್ಷನ್ 310 ಅಡಿ ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಕೋರ್ಟ್ ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಆದೇಶ ನೀಡಿದ್ದರೂ, ತನಗೆ ಜೈಲಿನಲ್ಲಿ ಮೂಲಸೌಕರ್ಯ ನೀಡಿಲ್ಲ. ಹೀಗಾಗಿ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಮಗ ನಿಂದನೆ ಕೇಸ್ ದಾಖಲಿಸಲು ಕೋರ್ಟ್ ಆದೇಶ ನೀಡಬೇಕೆಂದು ಕೋರಿ ಈ ಹಿಂದೆ ನಟ ದರ್ಶನ್ ಸಲ್ಲಿಕೆ ಮಾಡಿದ್ದ ಆದೇಶವನ್ನು ಕೋರ್ಟ್ ಈ ಹಿಂದೆ ಕಾಯ್ದಿರಿಸಿತ್ತು. ಆಕ್ಟೋಬರ್ 9 ಕ್ಕೆ ಆದೇಶವನ್ನು 57 ನೇ ಸೆಷನ್ಸ್ ಕೋರ್ಟ್ ಕಾಯ್ದಿರಿಸಿದೆ.  ಆ ಅರ್ಜಿಯ ಬಗ್ಗೆ ಆದೇಶ ನೀಡುವ ಮುನ್ನ ಜೈಲಿಗೆ ಭೇಟಿ ನೀಡಿ ಜೈಲಿನ ಮೂಲಸೌಕರ್ಯ ಪರಿಶೀಲಿಸುವಂತೆ ನಟ ದರ್ಶನ್ ಈಗ ಹೊಸ ಅರ್ಜಿ ಸಲ್ಲಿಸಿದ್ದಾರೆ.

Share This Article