ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿನ್ನೆಯಿಂದ ಜಾತಿಗಣತಿ ಚುರುಕು ಪಡೆದುಕೊಂಡಿದೆ. ಜಾತಿ ಗಣತಿಗೆ ಬೇಕಾದ ಪ್ರಶ್ನೆಗಳಷ್ಟೇ ಇಲ್ಲದೆ, ಹಲವು ಬೇಡದ ಪ್ರಶ್ನೆಗಳನ್ನೇ ಕೇಳಲಾಗಿದೆ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಕೇಂದ್ರ ಸಚಿವ, ತುಮಕೂರು ಸಂಸದ ವಿ ಸೋಮಣ್ಣ ಕೂಡ ಜಾತಿಗಣತಿಯಲ್ಲಿರುವ ಪ್ರಶ್ನೆಗಳಿಗೆ ಗರಂ ಆಗಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಮನೆಗೆ ಗಣತಿದಾರರು ಸಮೀಕ್ಷೆಗೆ ತೆರಳಿದ್ದರು. ಅದರಲ್ಲೂ 9 ಸಿಬ್ಬಂದಿಗಳು ತೆರಳಿದ್ದರು. ಈ ವೇಳೆ ಉಪಜಾತಿ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸೋಮಣ್ಣ, ಅದೆಲ್ಲಾ ಯಾಕೆ ಬೇಕು. ಸಿದ್ದರಾಮಯ್ಯ ಜಾತಿ ಎಂದಿ ಬರೆದುಕೊಳ್ಳಿ. ಮದುವೆ ಆದಾಗ ನಿಮಗೆ ಎಷ್ಟು ವರ್ಷ ಅಂತ ಕೇಳಿದಾಗ ದುರಂತ ನಮ್ಮ ಅಮ್ಮನ ಕೇಳಬೇಕು 26 ಅಂತ ಬರೆದುಕೊಳ್ಳಿ ಎಂದಿದ್ದಾರೆ.
ಇದು ಸಿದ್ದರಾಮಯ್ಯ ಅವರು ವೋಟ್ ಗಾಗಿ ಸಮೀಕ್ಷೆ ಮಾಡಿಸುತ್ತಿರುವುದು. ಯಾರೂ ಅವಿವೇಕಿಗಳು ಹೇಳಿ. ಇದರಲ್ಲಿನ ಅನೇಕ ಪ್ರಶ್ನೆಗಳಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಂತಾನೇ ಹಾಕಿಕೊಳ್ಳಿ ಎಂದಿದ್ದಾರೆ. ಇಷ್ಟು ಪ್ರಶ್ನೆಗಳು ಬೇಕಾ..? ನಮ್ಮ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಗಣತಿ ಮಾಡಿಸುತ್ತದೆ. ಅದನ್ನ ನೀವೇ ನೋಡಿವಿರಂತೆ. ಹೇಗೆ ಮಾಡಿಸುತ್ತದೆ ಎಂದು. ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಬಾರದು. ಇಷ್ಟು ಜನ ಯಾಕೆ ಬಂದಿದ್ದೀರಿ..? ಇಷ್ಟು ಪ್ರಶ್ನೆಗಳು ಬೇಕಾ..? ಇದೆಲ್ಲಾ ನೀವೂ ಸರ್ಕಾರಕ್ಕೆ ತಿಳಿಸಬೇಕಲ್ವಾ ಎಂದು ಗಣತಿದಾರರಿಗೆ ವಿ ಸೋಮಣ್ಣ ಅವರು ಪ್ರಶ್ನೆ ಮಾಡಿದ್ದಾರೆ. ನಿನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಹ ಬೇಸರ ಮಾಡಿಕೊಂಡಿದ್ದರು. ಇಷ್ಟೊಂದು ಪ್ರಶ್ನೆಗಳ ಅಗತ್ಯತೆ ಇದೆಯಾ ಎಂದು ಕೇಳಿದ್ದರು.






