ಕೊಪ್ಪಳ ಜಿಲ್ಲೆಯ ಯಲ್ಲಾಲಿಂಗಾ ಕೊಲೆ 2015ರಲ್ಲಿ ನಡೆದಿತ್ತು. ಕೊಪ್ಪಳ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗ ಶವ ಪತ್ತೆಯಾಗಿತ್ತು. ಈ ಕೊಲೆ ಸಂಬಂಧ ಅರೆಸ್ಟ್ ಆಗಿದ್ದ 9 ಜನರನ್ನು ಖುಲಾಸೆ ಮಾಡಿದೆ. ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈ ತೀರ್ಪನ್ನ ನೀಡಿದೆ. ಶಿವರಾಜ್ ತಂಗಡಗಿ ಆಪ್ತ ಹನುಮೇಶ್ ನಾಯಕ್ ಸೇರಿ 9 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಖುಲಾಸೆ ಮಾಡಿದೆ.
ಹನುಮೇಶ್ ನಾಯಕ್ ಪುತ್ರ ಮಹಾಂತೇಶ್ ನಾಯಕ್, ಮನೋಜ್ ಪಾಟೀಲ್, ಬಾಳನಗೌಡ, ಕಾಡ ಮಂಜ, ನಂದೀಶ್, ಪರಶುರಾಮ್, ಯಮನೂರಪ್ಪ ಸೇರಿದಂತೆ 9 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಜೊತೆಗೆ ಎಲ್ಲರೂ ಜಾಮೀನಿನ ಮೇಲೆ ಹೊರಗೆ ಇದ್ದರು. ಜಿಲ್ಲಾ ನ್ಯಾಯಾಧೀಶರಾದ ಚಂದ್ರಶೇಖರ್ ತೀರ್ಪು ಪ್ರಕಟಿಸಿ, ಖುಲಾಸೆಗೊಳಿಸಿದ್ದಾರೆ. ಕೊಲೆ ಅಲ್ಲ ಆತ್ಮಹತ್ಯೆ ಎಂಬುದು ತಿಳಿದು ಬಂದಿದೆ.
ತೀರ್ಪಿನ ಬಳಿಕ ಆರೋಪಿಗಳ ಪರ ವಕೀಲ ಗಂಗಾಧರ್ ಪ್ರತಿಕ್ರಿಯೆ ನೀಡಿದ್ದು, ಇದೊಂದು ಆತ್ಮಹತ್ಯೆಯ ಪ್ರಕರಣ ಎಂದು ಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ. 76 ಸಾಕ್ಷಿಗಳು ಈ ಕೇಸ್ ನಲ್ಲಿದ್ದರು. ಹಲವು ಸಾಕ್ಷಿಗಳು ನಿರಾಧಾರವಾಗಿದ್ದವು. ಈ ಕೇಸ್ ನಲ್ಲಿ ಹನುಮೇಶ್ ನಾಯಕ ಹಾಗೂ ಅವರ ಕುಟುಂಬದ ಪಾತ್ರವಿಲ್ಲ. ಯಲ್ಲಾಲಿಂಗ ಕೇಸದ ಆತ್ಮಹತ್ಯೆ ಎಂದು ಪರಿಗಣಿಸಲಾಗಿದೆ. ರೈಲ್ವೆ ಪೋಸ್ಟ್ ಮಾರ್ಟಮ್ ವರದಿಯಲ್ಲೂ ರೈಲ್ವೆ ಗಾಯದಿಂದ ಸಾವು ಸಂಭವಿಸಿದೆ ಎಂಬ ವರದಿ ಬಂದಿದೆ. ಇದೊಂದು ರಾಜಕೀಯ ಷಡ್ಯಂತ್ರ ಎಂದು ತಿಳಿಸಿದ್ದಾರೆ.




