ದರ್ಶನ್, ಪವಿತ್ರಾ ಗೌಡ ಆಯ್ತು : ಇನ್ನು ಐವರ ಜಾಮೀನು ರದ್ದತಿಗೆ ಅರ್ಜಿ..!

1 Min Read

 

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಜನರ ಜಾಮೀನು ರದ್ದಾಗಿದೆ. ಇವರೆಲ್ಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಮ್ಮೆ ಲಾಕ್ ಆಗಿದ್ದಾರೆ. ಇದೀಗ ಇನ್ನು ಐವರು ಆರೋಪಿಗಳ ಜಾಮೀನು ರದ್ದು ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು ಪ್ಲ್ಯಾನ್ ಮಾಡಿದ್ದಾರೆ.

ಐವರು ಆರೋಪಿಗಳ ಜಾಮೀನು ರದ್ದು ಮಾಡುವುದಕ್ಕೆ ಪೊಲೀಸರು ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿನಯ್, ನಂದೀಶ್, ಧನರಾಜ್, ಪವನ್, ರಾಘವೇಂದ್ರ ಈ ಐವರು ಜಾಮೀನು ರದ್ದು ಮಾಡಬೇಕೆಂದು ಕಾಮಾಕ್ಷಿ ಪಾಳ್ಯ ಪೊಲೀಸರು ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಹಿನ್ನೆಲೆ ಆ ಐದು ಆರೋಪಿಗಳಿಗೆ ಹೈಕೋರ್ಟ್ ಕೂಡ ನೋಟೀಸ್ ಅನ್ನು ನೀಡಿದೆ. ಹೈಕೋರ್ಟ್ ನೀಡಿರುವ ನೋಟೀಸ್ ಅನ್ನು ಪಡೆಯುವುದಕ್ಕೆ ಎ10 ವಿನಯ್, ಎ5 ನಂದೀಶ್ ಮೀನಾಮೇಶ ಮಾಡಿದ್ದಾರೆ.

ಅದರಲ್ಲೂ ಹೈಕೋರ್ಟ್ ನೋಟೀಸ್ ನೀಡಿದರು ಸಹ ಸ್ವೀಕಾರ ಮಾಡದೆ ಕಳ್ಳಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ನೋಟೀಸ್ ರಿಸೀವ್ ಮಾಡಿದರೆ, ಕೋರ್ಟ್ ಪ್ರಕ್ರಿಯೆಗಳಲ್ಲಿ ಭಾಗವಹಿಸಲೇಬೇಕಾಗುತ್ತದೆ. ಹೀಗಾಗಿ ನೋಟೀಸ್ ಪಡೆಯುವುದಕ್ಕೇನೆ ಮೀನಾಮೇಶ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಸುಪ್ರೀಂ ಕೋರ್ಟ್ ನಲ್ಲಿ ಏನೇ ವಾದ ಪ್ರತಿವಾದ ಮಂಡಿಸಿದರು ಸಹ ದರ್ಶನ್, ಪವಿತ್ರಾ ಗೌಡ ಸೇರಿದಂತೆ ರೆಳು ಜನರ ಜಾಮೀನು ರದ್ದಾಗಿತ್ತು. ಜಾಮೀನು ಮುಂದುವರೆಯಬಹುದು ಎಂಬ ನಿರೀಕ್ಷೆ ಆರೋಪಿಗಳಲ್ಲಿ ಇತ್ತು. ಆದ್ರೆ ಸುಪ್ರೀಂ ಕೋರ್ಟ್ ತೀರ್ಪು ಎಲ್ಲರನ್ನು ದಿಗ್ಬ್ರಮೆಗೊಳಿಸಿತ್ತು. ಇದೀಗ ಉಳಿದ ಐವರು ಆರೋಪಿಗಳಿಗೆ ಆತಂಕ ಶುರುವಾಗಿದೆ. ಹೀಗಾಗಿ ಕೋರ್ಟ್ ನೋಟೀಸ್ ಸ್ವೀಕಾರ ಮಾಡಿಲ್ಲ‌.

Share This Article