ಬೆಂಗಳೂರು: ಇಂದು ನಟ ದರ್ಶನ್ ಕೇಳಿದ್ದ ಹಾಸಿಗೆ, ದಿಂಬಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ನಡೆದಿದೆ. ನೀವೂ ಆರ್ಡರ್ ಮಾಡಿದ ರೀತಿಯಲ್ಲಿ ನಮಗೆ ಯಾವುದೇ ಸೌಲಭ್ಯವನ್ನು ಕೊಟ್ಟಿಲ್ಲ ಎಂಬ ಆರೋಪವನ್ನು ದರ್ಶನ್ ಮಾಡಿದ್ದರು. ಈ ಅರ್ಜಿಗೆ ಉತ್ತರ ಕೊಡುವುದಕ್ಕೆ ಕೋರ್ಟ್ ಗೆ , ಜೈಲಿನ ಸೂಪರಿಂಡೆಂಟ್ ಸುರೇಶ್ ಅವರು ವಿಚಾರಣೆಗೆ ಹಾಜರಾಗಿ ವಿವರಣೆಯನ್ನು ನೀಡಿದರು. ಸರ್ಕಾರದ ಪರವಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದಾರೆ.
ಜೈಲಿನ ನಿಯಮದ ಪ್ರಕಾರ ಎಲ್ಲವನ್ನು ನೀಡಲಾಗಿದೆ. ಅದನ್ನು ಬಿಟ್ಟು ಮಲಗುವುದಕ್ಕೆ ಪಲ್ಲಂಗವನ್ನೇ ಕೊಡಿ ಅಂದ್ರೆ ಹೇಗೆ ಕೊಡುವುದು. ಎಲ್ಲವನ್ನು ಕೊಡುವುದಕ್ಕೆ ನಮಗೆ ಪ್ರಾವಿಷನ್ ಇಲ್ಲ. ಬೆಳಗ್ಗೆ ಒಂದು ಗಂಟೆ ಸಂಜೆ ಒಂದು ಗಂಟೆ ವಾಕ್ ಮಾಡಲು ಅವಕಾಶ ನೀಡಲಾಗಿದೆ. ಆರೋಪಿ ಕೇಳಿದ ಬ್ಯಾರಕ್ ಕೊಡುವುದಕ್ಕೆ ಆಗಲ್ಲ ಎಂದು ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ಸರ್ಕಾರದ ಪರ ವಕೀಲರ ವಾದಕ್ಕೆ ದರ್ಶನ್ ಪರ ವಕೀಲರಾದ ಸುನೀಲ್ ವಾದ ಮಂಡಿಸಿದ್ದಾರೆ. ತಟ್ಟೆ, ಲೋಟ, ಚಾಪೆ, ಮಗ್ಗು, ದಿಂಬು ನೀಡಿದ್ದಾರೆ. ಕೋರ್ಟ್ ಆದೇಶದ ಬಳಿಕ ಕಂಬಳಿ ಕೊಟ್ಟಿದ್ದಾರೆ. ಪಲ್ಲಂಗ ಅಂದ್ರೆ ಮಂಚ. ಚಿನ್ನದ ಮಂಚವನ್ನ ಕೊಡಿ ಅಂತ ಏನು ಕೇಳುತ್ತಿಲ್ಲ. ವಾಕಿಂಗ್ ಗೆ ಅವಕಾಶ ಕೊಡುತ್ತಿಲ್ಲ. ಸೆಲ್ ಒಳಗೆ ವಾಕ್ ಮಾಡಿ ಅಂತಿದ್ದಾರೆ. ದರ್ಶನ್ ಭೇಟಿಗೆ ಅವಕಾಶವನ್ನು ಕೊಡುತ್ತಿಲ್ಲ ಎಂದು ಸುನೀಲ್ ವಾದ ಮಂಡಿಸಿದ್ದಾರೆ. ಇದೆಲ್ಲವನ್ನು ಕೇಳಿದ ಜಡ್ಜ್ ಜೈಲಾಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಸದ್ಯ ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿಕೆ ಮಾಡಿದೆ.






