ಸುದ್ದಿಒನ್
ನಟ ವಿಜಯ್ ರ‌್ಯಾಲಿ ನೋಡಲು ಬಂದ ಅಮಾಯಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರಿಗೆ ವಿಜಯ್ ಸಂತಾಪ ಕೂಡ ಸೂಚಿಸಿದ್ದಾರೆ. ಆದರೆ ಹಲವು ಅನುಮಾನಗಳು ಇರುವ ಕಾರಣ ವಿಜಯ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾರ್ಯಕ್ರಮದಲ್ಲಿ ಪೊಲೀಸ್ ಭದ್ರತೆ ಸರಿಯಾಗಿ ಇರಲಿಲ್ಲ. ಆ್ಯಂಬುಲೆನ್ಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಕಡೊತಗೊಳಿಸಲಾಗಿತ್ತು. ಎಂಬಿತ್ಯಾದಿ ಆರೋಪಗಳು ಈ ಘಟನೆಯ ಸಂಬಂಧ ಕೇಳಿ ಬಂದಿತ್ತು. ಆದರೆ ಈ ಆರೋಪಗಳನ್ನು ಎಡಿಜಿಪಿ ತಳ್ಳಿ ಹಾಕಿದ್ದಾರೆ.
ಹಲವು ಅನುಮಾನಗಳು ಇರುವ ಕಾರಣ, ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಟಿವಿಕೆ ನಾಯಕರು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ಇಂದು ನಡೆಯಲಿದೆ. ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ವಿಜಯ್ ದಳಪತಿ ಅಲೆ ಇದೆ. ವಿಜಯ್ ರಾಜಕೀಯ ಪಕ್ಷದ ರ‌್ಯಾಲಿ ಗೆ ಜನಸಾಗರ ಸೇರುತ್ತಿದೆ. ಹೀಗಾಗಿ ಕಾಲ್ತುಳಿತ ಕೇಸ್ ನಲ್ಲಿ ವಿಜಯ್ ಬಂಧಿಸಿದದರೆ ಸಿಂಪತಿ ಸೃಷ್ಟಿ ಆಗುವ ಸಾಧ್ಯತೆ ಇದು ನಟ ವಿಜಯ್ ಮೇಲೆ ಅನುಕಂಪಕ್ಕೂ ಕಾರಣವಾಗಬಹುದು ಎಂಬ ಲೆಕ್ಕಾಚಾರಗಳಿವೆ.
ಡಿಎಂಕೆ ಪಕ್ಷದ ವಿರುದ್ಧ ಅಭಿಪ್ರಾಯಕ್ಕೂ ಕಾರಣವಾಗಬಹುದು. ಆದ್ದರಿಂದ ನ್ಯಾಯಾಂಗ ತನಿಖೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಡಿಎಂಕೆ ಚಿಂತನೆ ನಡೆಸಿದೆ. ಕಾಲ್ತುಳಿತ ಬೆನ್ನಲ್ಲೇ ಟಿವಿಕೆ ಸಂಸ್ಥಾಪಕ ನಟ ವಿಜಯ್ ಗೆ ಬಾಂಬ್ ಬೆದರಿಕೆಗಳು ಬಂದಿವೆ. ಹೀಗಾಗಿ ಚೆನ್ನೈ ಪೊಲೀಸರು ವಿಜಯ್ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.


