Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಾತಿ ಗಣತಿ‌ಸಮೀಕ್ಷೆ : ವೀರಶೈವ ಲಿಂಗಾಯತ ಧರ್ಮದ ಕಾಲಂನಲ್ಲಿ ಇತರೆ ಅಂತ ಬರೆಸಲು ಸೂಚನೆ

---Advertisement---

 

ಬೆಂಗಳೂರು: ಜಾತಿ ಗಣತಿ ಸಮೀಕ್ಷೆಯಲ್ಲಿ ಎಲ್ಲರೂ ಲಿಂಗಾಯತ ಅಂತಷ್ಟೇ ಬರೆಸುವುದಕ್ಕೆ ಈಗಾಗಲೇ ಒಟ್ಟಾಗಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಕಲಂನಲ್ಲಿ ಇತರೆ ಎಂದು ಬರೆಸಲು ನಿಡುಮಾಮಿಡಿ ಸ್ವಾಮೀಜಿ ಸೂಚಿಸಿದ್ದಾರೆ. ಅವರ ಲೇಖನ ಹೀಗಿದೆ.

ವಿಉರಶೈವ ಲಿಂಗಾಯತ ಎಂಬುದು ಒಂದು ಧರ್ಮಕ್ಕೆ ಇರುವ ಎರಡು ಹೆಸರು. ಎರೆಉ ಸಂಸ್ಕೃತ ಶಬ್ದಗಳೇ. ವೀರಶೈವ ಎಂಬುದು ಗ್ರಾಂಥಿಕ ಶಬ್ದವಾದರೆ ಲಿಂಗಾಯತ ಎನ್ನುವುದು ಆಡು ಮಾತಿನ ಶಬ್ಧ. ವೀರಶೈವ ಮತ್ತು ಲಿಂಗಾಯತದ ಮೂಲ ಸಿದ್ಧಾಂತ ಒಂದೇ ಆಗಿರುವುದರಿಂದ ಇವೆರಡು ಅಭಿನ್ನ. ಎರಡಕ್ಕೂ ಅಷ್ಟಾವರಣವೇ ಅಂಗ ಪಂಚಾಚಾರಣವೇ ಪ್ರಾಣ ಷಟ್ ಸ್ಥಲವೇ ಆತ್ಮ. ಗುರಿ ಒಂದೇ. ಮಾರ್ಗ ಭಿನ್ನ. ಇದರಿಂದ ಭಿನ್ನವೆಂಬಂತೆ ತೋರುತ್ತವೆ. ಆಚರಣಾ ಮಾರ್ಗದಲ್ಲು ವೀರಶೈವ ಅರ್ಧ ತಾಂತ್ರಿಕ ಅರ್ಧ ವೈದಿಕವಾಗಿದ್ದು, ಲಿಂಗಾಯತ ಬಹುಅಲು ಅವೈದಿಕವಾಗಿದೆ. ಈ ಮಾರ್ಗಗಳಾದರೂ ಸಮುದಾಯಗಳ ಆಶಯಕ್ಕೆ ಅನುಗುಣವಾಗಿ ರೂಪುಗೊಂಡಂತವು ಸಮುದಾಯಗಳು ತಮ್ಮ ಇಚ್ಛೆಯನ್ನು ಅನುಸರಿಸಿ ಈ ಮಾರ್ಗಗಳನ್ನು ಅಳವಡಿಸಿಕೊಂಡಿವೆ. ವೀರಶೈವದ ಸಮಾನತೆಯ ತತ್ವವನ್ನು ವೀರಶೈವ ಮಾರ್ಗಾವಲಂಬಿಗಳು ಆದರ್ಶವೆಂದು ತಿಳಿದರೆ ವಿನಃ ಆಚರಣೆಯಲ್ಲಿ ಅಳವಡಿಸಿಕೊಳ್ಳಲಿಲ್ಲ.

ಲಿಂಗಾಯತ ಮಾರ್ಗಾವಲಂಬಿಗಳು ಬಸವಾದಿ ಶರಣರ ಸಮಾನತೆಯ ಆಶಯಗಳನ್ನು ಆದರ್ಶವೆಂದು ಭಾವಿಸಿದರೆ ವಿನಃ ಅವರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ನಡೆ ನುಡಿ ಒಂದಾಗಿರಬೇಕೆಂಬ ತತ್ವದ ವೀರಶೈವ ಲಿಂಗಾಯತದ ನುಡಿಯೇ ಬೇರೆ ನಡೆಯೇ ಬೇರೆಯಾಗಿ, ಯಥಾಸ್ಥಿತಿ ವಾದವನ್ನೇ ಅಪ್ಪಿಕೊಂಡವು. ಇದರಿಂದ ಎರಡೂ ಕಡರ ಹಿಂದಿನ ಜಾತಿ ಉಪಜಾತಿಗಳ ಮೇಲು ಕೀಳಿನ ಲಿಂಗ ತಾರತಮ್ಯ್ ಮೌಢ್ಯಾಚಾರಣೆಯ ವ್ಯವಸ್ಥೆಯೇ ಮುಂದುವರೆದು ಸಮಾನತೆಯ ಆಶಯಗಳು ಸಾಕಾರಗೊಳ್ಳದೆ ಹೋದವು ಎಂದು ಉಲ್ಲೇಖ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now