ಹಲವಾರು ರಾಷ್ಟ್ರೀಯ ಪಕ್ಷಗಳು ಕುಟುಂಬದ ಪಕ್ಷಗಳಾಗಿವೆ : ಪ್ರೀತಮ್ ಗೌಡ

2 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಸೆ. 25 : ದೇಶದಲ್ಲಿನ ಹಲವಾರು ರಾಷ್ಟ್ರೀಯ ಪಕ್ಷಗಳು ಕುಟುಂಬದ ಪಕ್ಷಗಳಾಗಿವೆ, ಇಲ್ಲಿ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ತಮ್ಮ ಮನೆತನ ಮುಖ್ಯವಾಗಿದೆ. ಆದರೆ ಭಾರತೀಯ ಜನತಾ ಪಾರ್ಟಿ ಇದಕ್ಕೆ ಹೊರತಾಗಿದೆ, ಪ್ರತಿ ಮೂರು ವರ್ಷಕ್ಕೆ ಭೂತ್ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೂ ಸಹಾ ಚುನಾವಣೆ ಅಥವಾ ನೇಮಕಾತಿಯ ಮೂಲಕ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹಾಸನದ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ತಿಳಿಸಿದರು.

ಚಿತ್ರದುರ್ಗ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನ ಸಂಘದ ನೇತಾರ, ಪಂಡಿತ್‍ದೀನ್‍ದಯಾಳ್ ಉಪಾಧ್ಯಾಯರ ಜಯಂತಿ ಹಾಗು ಆತ್ಮನಿರ್ಭರ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತಾಂಬೆ, ಪಂಡಿತ್ ದೀನ್ ದಯಾಳ್ ಉಪಾಧ್ಯ ಹಾಗೂ ಶ್ಯಾಂ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಬೇರೆ ಪಕ್ಷದವರಂತೆ ಕುಟುಂಬದವರನ್ನು ನೇಮಕ ಮಾಡುವ ಪರಿಪಾಠ ಇಲ್ಲಿ ಇಲ್ಲ ಎಲ್ಲವೂ ಸಹಾ ಪಕ್ಷದ ಆದೇಶದಂತೆ ನಡೆಯಬೇಕಿದೆ, ಇಲ್ಲಿ ಯಾವುದೇ ಹುದ್ದೆಯಾಗೆ ಚುನಾವಣೆ ಅಥವಾ ನೇಮಕಾತಿಯ ಮೂಲಕ ನಡೆಯಬೇಕಿದೆ, ಇಲ್ಲಿ ಕುಟುಂಬ ರಾಜಕಾರಣಕ್ಕೆ ಮಾನ್ಯತೆ ಇಲ್ಲ ಪಕ್ಷದ ಕಾರ್ಯಕತರೇ ಮುಖ್ಯವಾಗಿದ್ದಾರೆ ಎಂದರು.

ನಮ್ಮಲ್ಲಿ ಭೂತಮಟ್ಟದಿಂದ ಹಿಡಿದು ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೂ ಸಹ ನೇಮಕಾತಿಯ ಮೂಲಕ ನಡೆಯುತ್ತದೆ ಇಲ್ಲಿ ಕುಟುಂಬದ ರಾಜಕಾರಣ ನಡೆಯುವುದಿಲ್ಲ, ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದವರಿಗೆ ಉನ್ನತವಾದ ಹುದ್ದೆಗಳು ಸಿಗಲಿವೆ, ನಮ್ಮ ಪಕ್ಷದಲ್ಲಿ ಕಾರ್ಯಕರ್ತರೇ ಜೀವಾಳವಾಗಿದ್ದಾರೆ, ದೇಶದ ಹಲವಾರು ರಾಜ್ಯಗಳಲ್ಲಿ ಇರುವ ರಾಜಕೀಯ ಪಕ್ಷಗಳಲ್ಲಿ ಯಾವುದಾದರೂ ಉನ್ನತವಾಧ ಹುದ್ದೆ ನೇಮಕವಾಗಬೇಕಾದರೆ ಅಲ್ಲಿ ಅವರು ಕುಟುಂಬದರನ್ನ ನೇಮಕಮಾಡುತ್ತಾರೆ ಇದು ಕುಟುಂಬ ರಾಜಕಾರಣವಾಗುತ್ತದೆ, ಆದರೆ ನಮ್ಮಲ್ಲಿ ಈ ರೀತಿಯಾದ ಪದ್ದತಿ ಇಲ್ಲ ಎಲ್ಲವೂ ಸಹಾ ಪಕ್ಷದ ನಿಷ್ಠಾವಂತರ ನೇಮಕಾತಿಯಾಗುವುದರ ಮೂಲಕ ಹುದ್ದೆಯನ್ನು ನೀಡಲಾಗುತ್ತದೆ ಎಂದರು.

ಮುಂದಿನ ದಿನದಲ್ಲಿ ಪಕ್ಷ ಕಾರ್ಯಕರ್ತರ ಚುನಾವಣೆಯಾದ ಜಿ.ಪಂ. ತಾ.ಪಂ. ನಗರಸಭೆಯ ಚುನಾವಣೆಗಳು ಬರಲಿವೆ, ಈ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕಿದೆ ಚುನಾವಣೆಯಲ್ಲಿ ಸ್ಪರ್ದೆ ಮಾಡುವವರು ಈಗಿನಿಂದಲೇ  ಜನತೆ ವಿಶ್ವಾಸವನ್ನುಗಳಿಸುವ ಕಾರ್ಯವನ್ನು ಮಾಡಬೇಕಿದೆ. ಅವರ ಕಷ್ಟಗಳಿಗೆ ಭಾಗಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಇದು ಮುಂದಿನ ದಿನದಲ್ಲಿ ಉಪಯೋಗಕ್ಕೆ ಬರಲಿದೆ ಎಂದು ಪ್ರೀತಮ್ ಗೌಡ ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ವಹಿಸಿದ್ದರು, ಶಾಸಕರಾದ  ಎಂ .ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾಜಿ ಶಾಸಕರಾದ ,ಎಸ್.ಕೆ.ಬಸವರಾಜನ್, ,ನೇರ್ಲಗುಂಟೆ  ತಿಪ್ಪೇಸ್ವಾಮಿ, ಖನಿಜ ನಿಗಮದ ಮಾಜಿ ಅಧ್ಯಕ್ಷರಾದ ಲಿಂಗಮೂರ್ತಿ, ಮಾಜಿ ಅಧ್ಯಕ್ಷ ಎ.ಮುರಳಿ, ಮುಖಂಡರಾದ ಲಕ್ಷ್ಮೀಕಾಂತ್, ಹನುಮಂತೇಗೌಡ, ರಾಮದಾಸ್, ಅನಿಲ್ ಕುಮಾರ್ ಭಾಗವಹಿಸಿದ್ದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದಾಪುರ ಸುರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು, ಸಂಪತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ನಿನ್ನೆ ನಿಧನರಾದ ಸಾಹಿತಿ ಬೈರಪ್ಪರವರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ಇದಕ್ಕೂ ಮುನ್ನಾ ಜನ ಸಂಘದ ನೇತಾರ, ಪಂಡಿತ್‍ದೀನ್‍ದಯಾಳ್ ಉಪಾಧ್ಯಾಯರ ಜಯಂತಿಯ ಅಂಗವಾಗಿ ನಗರದ ಎಂ.ಕೆ.ಪ್ಯಾಲೇಸ್ ಹಿಂಬಾಗ ತ್ರಿಶೂಲಾಂಜನೇಯ ದೇವಸ್ಥಾನದಲ್ಲಿ  ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು.

Share This Article
Enable Notifications OK No thanks