ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 22 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಛಲವಾದಿ ಎಂದು ಬರೆಸುವಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಛಲವಾದಿ ಸಮಾಜದ ಮುಖಂಡರುಗಳು ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಚರ್ಚಿಸಿದರು.
ಛಲವಾದಿ ಸಮಾಜದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ ಸಭೆಯಲ್ಲಿ ಮಾತನಾಡುತ್ತ ನಾಗಮೋಹನ್‍ದಾಸ್ ಆಯೋಗದ ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸಂಖ್ಯೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಸಂಖ್ಯೆಯನ್ನು 30,08,633 ಎಂದು ತೋರಿಸಿ ಎರಡನೆ ಸ್ಥಾನದಲ್ಲಿರಿಸಿ ಅನ್ಯಾಯವೆಸಗಿದೆ. ಅದಕ್ಕಾಗಿ ಈ ಬಾರಿಯ ಸಮೀಕ್ಷೆಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಸಬಾರದು. ಛಲವಾದಿ ಎಂದು ನಮೂದಿಸುವಂತೆ ಮನವಿ ಮಾಡಿದರು.
ಛಲವಾದಿ ಸಮಾಜದ ಮುಖಂಡರುಗಳಾದ ಹೆಚ್.ಅಣ್ಣಪ್ಪಸ್ವಾಮಿ, ಎಸ್.ಎನ್.ರವಿಕುಮಾರ್, ಮಂಜುನಾಥ್, ಶಿವಪ್ರಸಾದ್, ಈರಜ್ಜನಹಟ್ಟಿ ತಿಪ್ಪೇಸ್ವಾಮಿ, ಚೋಳುಗುಡ್ಡದ ಚಂದ್ರು, ಜಗದೀಶ್, ಪರಮೇಶ್ ಪೂಜಾರಿ ಇವರುಗಳು ಸಭೆಯಲ್ಲಿ ಭಾಗವಹಿಸಿದ್ದರು.
