ಡಾ. ಆನಂದ ಸಂಕೇಶ್ವರರಿಗೆ ಪ್ರತಿಷ್ಠಿತ ಸಿಬಾ ಪ್ರಶಸ್ತಿ ಪ್ರದಾನ

1 Min Read

ಸುದ್ದಿಒನ್

ಸಾರಿಗೆ ಕ್ಷೇತ್ರದ ದಿಗ್ಗಜ ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಅವರಿಗೆ ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪುರಸ್ಕಾರ ಸಂದಿದ್ದು, ದುಬೈನಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಗೌರವಿಸಲಾಯಿತು.

ದುಬೈನ ಅಲ್​ ಹಬ್ತೂರ್​ ಪ್ಯಾಲೇಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಯುಎಇ ರಾಯಭಾರಿ ಹಾಗೂ ಎಎಜಿ ಚೇರ್ಮನ್​ ಡಾ. ಅಹ್ಮದ್​ ಅಬ್ದುಲ್​ ರೆಹಮಾನ್​ ಅಲ್ಬನ್ನಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಉದ್ಯಮ, ಸಂಸ್ಕೃತಿ ಮತ್ತು ವಾಣಿಜ್ಯ ವಲಯದಲ್ಲಿ ಜಾಗತಿಕವಾಗಿ ಪ್ರಭಾವ ಬೀರಿರುವವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ, ಸೌತ್​ ಇಂಡಿಯಾ ಬಿಸಿನೆಸ್​ ಅವಾರ್ಡ್ಸ್​ ಪರಿಚಯಿಸಿರುವ ಸೌತ್​ ಪವರ್​ಲಿಸ್ಟ್​-100 ಅನ್ನು ಅನಾವರಣಗೊಳಿಸಲಾಯಿತು.

ವಿಆರ್​ಎಲ್​ ಸಮೂಹದ ಎಂಡಿ ಡಾ. ಆನಂದ ಸಂಕೇಶ್ವರ ಅವರು 2025ರ ಪ್ರಶಸ್ತಿ ಪುರಸ್ಕೃತರಲ್ಲಿ ಒಬ್ಬರಾಗಿದ್ದಾರೆ. ವಿಆರ್​ಎಲ್​ ಸಂಸ್ಥೆಯನ್ನು ದೇಶದ ಅತಿ ದೊಡ್ಡ ಸಾರಿಗೆ ಕಂಪನಿಯಾಗಿ, ಪ್ರಮಾಣ ಹಾಗೂ ಕಾರ್ಯಾಚರಣೆ ದಕ್ಷತೆಯಲ್ಲಿ ಅತ್ಯಂತ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸಿದ್ದಾರೆ. ಈ ಗೌರವ ಕೇವಲ ವ್ಯಾಪಾರದ ಯಶಸ್ಸನ್ನು ಮಾತ್ರವಲ್ಲ ಲಾಜಿಸ್ಟಿಕ್ಸ್​ ಮೂಲಕ ಬೆಳವಣಿಗೆ ಮತ್ತು ದೇಶದ ಏಕೀಕರಣದಲ್ಲಿ ಅವರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.

ಸೌತ್​ ಪವರ್​ಲಿಸ್ಟ್​ 100 ರಲ್ಲಿ ಇರುವ ಹಲವು ರಂಗಗಳ ಸಾಧಕರನ್ನೂ ಗೌರವಿಸಲಾಯಿತು. ಈ ಪಟ್ಟಿಯು ಉದ್ಯಮಗಳು ಮತ್ತು ಪರಂಪರೆಯಲ್ಲಿ ನಾಯಕತ್ವದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆಯಾಗಿ ಈ ಗೌರವಾನ್ವಿತರು ಜಾಗತಿಕ ವೇದಿಕೆಯಲ್ಲಿ ದಣ ಭಾರತದ ದೂರದೃಷ್ಟಿ ಮತ್ತು ಚೈತನ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ಎಸ್​ಐಬಿಎ ಹೇಳಿದೆ.

Share This Article