ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಲ್ಸ್ ಜಾರಿಯಲ್ಲಿದ್ರು ಸಹ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ದಾರಿ ಮಧ್ಯದಲ್ಲಿಯೆ ಸುಸ್ತಾಗಿದ್ದಾರೆ.
ಇನ್ನು ನಿನ್ನೆ ಪಾದಯಾತ್ರೆಯಲ್ಲಿ ಭಾಗಿಯಾದವರಿಗೆ ಆರೋಗ್ಯ ಅಧಿಕಾರಿಗಳು ಟೆಸ್ಟ್ ಮಾಡಲು ಹೋದಾಗ ಡಿಕೆ ಶಿವಕುಮಾರ್ ಅವರು ಆರೋಗ್ಯ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ. ಈ ಸಂಬಂಧ ಇಂದು ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ನಾವೂ ಅವರು ಆರೋಗ್ಯದ ಬಗ್ಗೆ ಚಿಂತೆ ಮಾಡಿದ್ವಿ, ಆದ್ರೆ ಅವ್ರು ಅವರ ಸಂಸ್ಕೃತಿಯನ್ನ ತೋರಿಸಿದ್ದಾರೆ ಎಂದಿದ್ದಾರೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಆರೋಗ್ಯದ ಕಾಳಜಿಯಿಂದ ಅಲ್ಲಿಗೆ ಹೋಗಿದ್ದು, ಶಿವಕುಮಾರ್ ಒಬ್ಬರಿಗೆ ಅಲ್ಲ ಎಲ್ಲರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕಾಗಿತ್ತು. ಇದನ್ನು ಅರ್ಥ ಮಾಡಿಕೊಳ್ಳದ ಶಿವಕುಮಾರ್ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.