ಕಡ್ಡಾಯವಾಗಿ ಮಾದಿಗ ಅಥವಾ ಒಲೆಯ ಎಂದು ಬರೆಸಿ : ಮಾಜಿ ಸಚಿವ ಹೆಚ್.ಅಂಜನೇಯ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಸೆ.17 : ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಶೈಕ್ಷಣಿಕ ಹಾಗೂ ದೇವದಾಸಿ ಸರ್ವೇಗಳು ನಡೆಯುತ್ತಿವೆ. ಒಳಮೀಸಲಾತಿ ಕೂಡ ಜಾರಿಯಾಗಿದೆ. ಎಲ್ಲರೂ ಸರ್ವೆಯಲ್ಲಿ ಮಾದಿಗ ಅಥವಾ ಒಲೆಯ ಎಂದು ಬರೆಯಿಸಬೇಕು ಎಂದು ಮಾಜಿ ಸಚಿವ ಹೆಚ್.ಅಂಜನೇಯ ಸಮುದಾಯದವರಲ್ಲಿ ಮನವಿ ಮಾಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಯಾಗಿದೆ ಅದರಲ್ಲಿ ಎ.ಡಿ ಮತ್ತು ಎಕೆ ಎಂದು ಗುಂಪುಗಳು ಮಾಡಿದ್ದಾರೆ. ಅದರಲ್ಲಿ ಮಾದಿಗರು ಎ ಗುಂಪಿಗೆ ಸೇರಬೇಕು, ಒಲೆಯರು ಬಿ ಗುಂಪಿಗೆ ಸೇರಬೇಕು. ಏನಾದ್ರೂ ನೀವು ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಎಂದು ಬರೆಸಿದರೆ ಚಿಪ್ಪು ಸಿಗುತ್ತದೆ ಎಂದು ಹೇಳಿದರು.

ಸರ್ವೇ ನಡೆಯುವ ವೇಳೆ ಕಡ್ಡಾಯವಾಗಿ ಮಾದಿಗ ಅಥವಾ ಒಲೆಯ ಎಂದು ಬರೆಸಲೇಬೇಕು. ರಾಜ್ಯದಲ್ಲಿ ಮಂದಿಗರನ್ನು ಕುಗ್ಗಿಸುವ ಹುನ್ನಾರ ನಡೆಯುತ್ತಿದ್ದು, ಸರ್ವೇ ಕಾರ್ಯದಲ್ಲಿ ಕಡ್ಡಾಯವಾಗಿ ಎಲ್ಲರೂ ಭಾಗವಹಿಸಬೇಕು. ಸರ್ವೇ ವೇಳೆ ಸರಿಯಾಗಿ ಜಾತಿ ಹೇಳದೆ ಹೋದರೆ ಒಳಮೀಸಲಾತಿಯಲ್ಲಿ ವಂಚನೆ ಆಗುತ್ತದೆ. ವೀರಶೈವರು, ಒಕ್ಕಲಿಗರು ಕಾಂತರಾಜ್ ವರದಿ ಮೂಲೆ ಗುಂಪು ಮಾಡಿಸಿದ್ದರು. ಆದ್ದರಿಂದ ಮಾದಿಗರು ಒಬ್ಬರು ಕೂಡ ಸರ್ವೆಯಿಂದ ಹೊರಗೆ ಉಳಿಯಬಾರದು ಎಂದು ಹೇಳಿದರು.

ಇನ್ನು ಮೀಸಲಾತಿಯ ವಿಚಾರವಾಗಿ ಜ್ಞಾನವಿಲ್ಲದವರು ಮಾತಾಡ್ತಾರೆ. ಎಲ್ಲವನ್ನೂ ಅಧ್ಯಯನ ಮಾಡಿ ನ್ಯಾ.ನಾಗಮೋಹನ ದಾಸ್ ವೈಜ್ಞಾನಿಕವಾಗಿ ವರದಿ ಮಾಡಿದ್ದಾರೆ. ಅದನ್ನು ಒಪ್ಪಿ ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಅನ್ನ ಕೊಟ್ಟಿದ್ದಾರೆ. ಬೆಳ್ಳಿ, ಬಂಗಾರದ ತಟ್ಟೆಯಲ್ಲಿ ಊಟ ಮಾಡಬೇಕು ಎಂದರೆ ಮಾದಿಗರು ಎಂದು ಬರೆಯಬೇಕು ಎಂದು ಹೆಚ್.ಅಂಜನೇಯ ಎಚ್ಚರಿಸಿದರು

Share This Article