ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 13 : ಹಿಂದೂ ಮಹಾಗಣಪತಿ ಉತ್ಸವದ ಶೋಭಾಯಾತ್ರೆಗೂ ಮೊದಲು ಭಗವಾಧ್ವಜ, ಹೂವಿನ ಹಾರ ಹಾಗೂ ತಿರುಪತಿ ದೇವಸ್ಥಾನದ ಮಾದರಿ ಪ್ರತಿಕೃತಿ ಹರಾಜು ಪ್ರಕ್ರಿಯೆ ನಡೆಸಲಾಯಿತು.
ಭಗವಾ ಧ್ವಜವನ್ನು ಬಿಜೆಪಿ ಮುಖಂಡ ಹನುಮಂತೇಗೌಡ 6 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು. ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯನ್ನು ವಜ್ರ ಮಹೇಶ್ 5.25 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ಗಣಪತಿಯ ಫಲಾಹಾರವನ್ನು ಐಶ್ವರ್ಯಾ ಗ್ರೂಪ್ ಕಿರಣ್ ಕುಮಾರ್ 1.25 ಲಕ್ಷ ರೂ.ಗಳಿಗೆ ಪಡೆದುಕೊಂಡರು.
ಕೈಯಲ್ಲಿ ರಚಿಸಿರುವ ಗಣಪತಿ ಕಲಾಕೃತಿಯನ್ನು ಮಂಜುನಾಥ್ ಎಂಬುವವರು 1.05 ಲಕ್ಷ ರೂ.ಗಳಿಗೆ ಪಡೆದುಕೊಂಡರು.
ಗಣಪತಿಯ ಹೂವಿನ ಹಾರವನ್ನು ಚಿತ್ರಹಳ್ಳಿ ಲವಕುಮಾರ್ 1 ಲಕ್ಷ ರೂ.ಗಳಿಗೆ ಹರಾಜಿನಲ್ಲಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿವಲಿಂಗಾನಂದ ಶ್ರೀಗಳು , ಶಾಂತವೀರ ಶ್ರೀಗಳು , ಶ್ರೀ ಮಾದಾರ ಚನ್ನಯ್ಯ ಶ್ರೀಗಳು, ಭಗೀರಥ ಶ್ರೀಗಳು, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಬಸವ ಮಾಚಿದೇವ ಶ್ರೀಗಳು, ವಿಎಸ್ಪಿ ಮುಖಂಡರಾದ ಷಡಾಕ್ಷರಪ್ಪ, ಡಾ.ಮಂಜುನಾಥ್, ಎಂಎಲ್ಸಿ ಕೆ.ಎಸ್.ನವೀನ್, ಜಿ ಎಸ್ ಅನಿತಕುಮಾರ್,ಡಾ.ಸಿದ್ಧಾರ್ಥ ಇತರರಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











