ತಿರುವನಂತಪುರಂ: ಈ ಮುಂಚೆ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನ ಟೀಚರ್ ಎಂದೇ ಕರೆಯುತ್ತಿದ್ದರು. ಲಿಂಗಬೇಧವಿಲ್ಲದೆ ಒಂದೇ ಪದದಲ್ಲಿ ಕರೆಯುತ್ತಿದ್ದರು. ಆದ್ರೆ ಇತ್ತೀಚೆಗೆ ಅದು ಸರ್, ಮೇಡಂ ಎಂಬ ಪದಗಳಿಂದ ಕರೆಯುತ್ತಿದ್ದಾರೆ. ಆದರೀಗ ಈ ಪದಕ್ಕೆ ಕೇರಳದಲ್ಲಿ ಬ್ರೇಕ್ ಬಿದ್ದಿದೆ.
ಇನ್ಮುಂದೆ ಪಾಠ ಹೇಳಿಕೊಡುವ ಗುರುಗಳಿಗೆ ಸರ್, ಮೇಡಂ ಎನ್ನುವ ಹಾಗಿಲ್ಲ. ಟೀಚರ್ ಎಂದೇ ಸಂಬೋಧಿಸಬೇಕು ಎಂದು ಕೇರಳದಲ್ಲಿ ಕಡ್ಡಾಯಗೊಳಿಸಿದೆ. ಪಾಲಕ್ಕಡ್ ಜಿಲ್ಲೆಯ ಒಲಶ್ಯೆರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಈ ನಿಯಮವನ್ನ ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲ ಈ ನಿಯಮವನ್ನ ಜಾರಿಗೆ ತಂದ ಮೊದಲ ಶಾಲೆಯಾಗಿದೆ.
ಈ ಬಗ್ಗೆ ಮಾತನಾಡಿರುವ ಶಾಲೆಯ ಮುಖ್ಯೋಪಾಧ್ಯಾಯ ವೇಣುಗೋಪಾಲನ್, ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುವಂದ ಅವರಿಂದ ಸ್ಪೂರ್ತಿ ಪಡೆದು, ಈ ನಿರ್ಧಾರಕ್ಕೆ ಬರಲಾಗಿದೆ. ಮತೂರು ಪಂಚಾಯತಿಯಲ್ಲೂ ಈ ಲಿಂಗ ಸಮಾನತೆಯಿಂದ ಹುದ್ದೆಯ ಹೆಸರಲ್ಲಿ ಕರೆಯಲಾಗುತ್ತಿದ್ದ ಸಂಪ್ರದಾಯವನ್ನು ತೊಡೆದು ಹಾಕಲಾಗಿತ್ತು. ಇದೆಲ್ಲರಿಂದ ಪ್ರೇರಣೆಗೊಂಡು ನಾವೂ ಕೂಡ ಲಿಂಗ ಬೇಧವಿಲ್ಲದೆ ಸಂಬೋಧಿಸುವ ಪದ್ಧತಿಯನ್ನು ನಮ್ಮ ಶಾಲೆಯಲ್ಲಿ ಅಳವಡಿಸಲಾಗಿದೆ ಎಂದಿದ್ದಾರೆ.