Anti-oxidants | ಆಂಟಿ ಆಕ್ಸಿಡೆಂಟ್ ಗಳು ಎಂದರೇನು ? ಆಹಾರದಲ್ಲಿ ಇವುಗಳ ಪ್ರಾಮುಖ್ಯತೆಯೇನು ?

suddionenews
4 Min Read

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್

ಒಂದು ಆಹಾರ ಉತ್ತಮ ರೀತಿಯಲ್ಲಿ ಮಾನವನಿಗೆ ಅನುಕೂಲಕಾರಿ ಆಗಬೇಕೆಂದರೆ ಅದರಲ್ಲಿ ಎಲ್ಲಾ ಸತ್ವ,ಜೀವಾಂಶಗಳು ಆಡಕವಾಗಿರಬೇಕಾಗುತ್ತದೆ. ಆಗ ಮಾತ್ರ ಅದು ಪರಿಪೂರ್ಣ ಆಹಾರ. ಉಪಯೋಗವಾಗದಿದ್ದ ಮೇಲೆ ಅಂತಹ ಆಹಾರ ಸೇವಿಸುವುದರಿಂದ ಯಾವುದೇ ಪ್ರಯೋಜನ ಮನುಷ್ಯನಿಗೆ ದೊರಕುವುದಿಲ್ಲ. ನಾರಿನ ಅಂಶ,ಪ್ರೋಟೀನ್ ವಿಟಮಿನ್, ಕಾರ್ಬೋಹೈಡ್ರೇಟ್ಸ್…. ಮುಂತಾದ ಎಲ್ಲಾ ಜೀವಸತ್ವಗಳು ನಮಗೆ ಅಗತ್ಯವಾಗಿ ಆಹಾರದ ಮೂಲಕ ಪೂರೈಕೆ ಆಗಬೇಕು. ಆಂಟಿ ಆಕ್ಸಿಡೆಂಟ್ ಗಳು ಕೂಡ ಇಂತಹದ್ದೇ ಜೀವ ಸತ್ವವಾಗಿದ್ದು ಆಹಾರದಲ್ಲಿ ಇದರ ಬಳಕೆ ಯಥೇಚ್ಛವಾಗಿ ಇರಬೇಕಾಗುತ್ತದೆ.

 

ಆಂಟಿ ಆಕ್ಸಿಡೆಂಟ್ಗಳನ್ನು, ಅದರ ಮಹತ್ವವನ್ನು ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕಾಗುತ್ತದೆ. ನಡೆಯುವ ಪ್ರತಿ ಕ್ರಿಯೆಗೂ ಸಮಾನಂತರವಾಗಿ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದು ನ್ಯೂಟನ್ನಿನ ಮೂರನೇ ಸೂತ್ರ. ಇದೇ ಆಧಾರದಂತೆ ನಮ್ಮ ದೇಹದಲ್ಲಿ ನಡೆಯುವ ಪ್ರತಿ ಆಹಾರದ ಜೀರ್ಣಕ್ರಿಯೆಯಲ್ಲಿ ತ್ಯಾಜ್ಯ ವಿಷಾಣು ಒಂದು ಕಡೆ ಹೊರ ಬಂದರೆ ಆರೋಗ್ಯಕರ ಸತ್ವ ದೇಹದ ಚೈತನ್ಯ ಹೆಚ್ಚಿಸುತ್ತದೆ.  ಈ ಜೀರ್ಣಕ್ರಿಯೆಯಲ್ಲಿ ಹೊರಬಂದ ವಿಷಾಣು- ತ್ಯಾಜ್ಯ ದೇಹದಲ್ಲಿ ಎಂದಿಗೂ ಉಳಿದುಕೊಳ್ಳಬಾರದು. ಹಾಗೊಂದು ವೇಳೆ ದೇಹದಲ್ಲಿ ಉಳಿದುಕೊಂಡರೆ ಅದು ದೇಹಕ್ಕೆ ರೋಗ ತರುತ್ತದೆ. ದಿನೇ ದಿನೇ ಇಂತಹ ವಿಷ ಪದಾರ್ಥ ದೇಹದಲ್ಲಿ ಸಂಗ್ರಹ ಆಗುತ್ತಾ ಹೋಗಿ ಕೊನೆಗೆ ತೀವ್ರ ಅನಾರೋಗ್ಯ ತರುತ್ತದೆ. ಶಾಶ್ವತ ದೈಹಿಕ ರೋಗಗಳಾದ ಕ್ಯಾನ್ಸರ್ ಮಧುಮೇಹ, ಹೃದ್ರೋಗ,ಬಿಪಿ ಗಳಿಗೆ ಆಹ್ವಾನ ನೀಡುತ್ತದೆ. ಇಂತಹ ವಿಷಾಣು ವಸ್ತುಗಳು ದೇಹದಲ್ಲಿ ಹೆಚ್ಚಾಗದಂತೆ ಜೀವ ರಕ್ಷಕವಾಗಿ ದೇಹವನ್ನು ಕಾಪಾಡುವುದೇ ಆಂಟಿ ಆಕ್ಸಿಡೆಂಟ್ ಜೀವಸತ್ವ.

ಏನಿದು ಆಂಟಿ ಆಕ್ಸಿಡೆಂಟ್ ಗಳು?:
ನಮ್ಮ ಜೀವಕೋಶಗಳನ್ನು ಹಾಳಾಗದಂತೆ ಅಸ್ಥಿರ ಅಣುಗಳಿಂದ, ಜೈವಿಕ ಒತ್ತಡವನ್ನು ಸೃಷ್ಟಿ ಮಾಡಿ ನಮ್ಮ ದೇಹದ ಆರೋಗ್ಯಕರ ಪ್ರೊಟೀನ್ ಗಳು ಡಿಎನ್ಎಗಳನ್ನು ಜೀವಕೋಶಗಳನ್ನು ಹಾಳು ಮಾಡುವ ವಿಷಾಣುಗಳಿಂದ, ಫ್ರೀ ರಾಡಿಕಲ್ ಗಳಿಂದ ನಮ್ಮ ದೇಹವನ್ನು ರಕ್ಷಣಾತ್ಮಕ ಕಾಪಾಡುವುದೇ ಆಂಟಿ ಆಕ್ಸಿಡೆಂಟ್ ಗಳು.
ವೈಜ್ಞಾನಿಕ ಪರಿಭಾಷೆಯಲ್ಲಿ ವಿಷಾಣುಗಳನ್ನು ನಾವು ಫ್ರೀ ರ್ಯಾಡಿಕಲ್ಸ್ ಎಂದು ಹೇಳುತ್ತೇವೆ. ಇಂಥ ಫ್ರೀ ರಾಡಿಕಲ್ ಗಳನ್ನು ನಿರ್ದಿಷ್ಟ ದೈಹಿಕ ಜಾಗಗಳಲ್ಲಿ ಬೆಳೆಯದಂತೆ ಹಾಗೂ ಹೆಚ್ಚಾಗದಂತೆ ಆಂಟಿ ಆಕ್ಸಿಡೆಂಟ್ ಗಳು ತಡೆಗಟ್ಟುತ್ತವೆ. ವಿಷಾಣುಗಳು ಹೆಚ್ಚಾದಂತೆ ವ್ಯಕ್ತಿಯು ಬೇಗನೆ ರೋಗಪೀಡಿತನಾಗುತ್ತಾನೆ. ಮುಪ್ಪು ಸಹ ಬೇಗನೆ ಆವರಿಸುತ್ತದೆ.

 

ದೈಹಿಕವಾಗಿ ಕಾರ್ಯಕ್ಷಮತೆ ಕ್ಷೀಣಿಸಿ ದೈಹಿಕ ಅಂಗಾಂಗಗಳ ಕಾರ್ಯಕ್ಷಮತೆಯು ಹಂತ ಹಂತವಾಗಿ ಕಡಿಮೆಯಾಗುತ್ತಾ ಸಾಗುತ್ತದೆ. ಈ ಕ್ರಿಯೆ ನಡೆಯಲು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತದೆ. ಇಂಥ ವಿಷಾಣುಗಳು ದೇಹದಲ್ಲಿ ತೀವ್ರವಾಗಿ ಏರಿಕೆಯಾದಾಗ ಅಲ್ಲಿನ ಆರೋಗ್ಯಕರ ಡಿ. ಎನ್. ಎ ಆರೋಗ್ಯಕರ ಜೀವಕೋಶಗಳ ಕಾರ್ಯನಿರ್ವಹಣೆ ಅಸ್ತವ್ಯಸ್ತ ಮಾಡಿಬಿಡುತ್ತದೆ ಹಾಗೂ ಕ್ಯಾನ್ಸರ್ ರೋಗಕ್ಕೆ ಸುಲಭವಾಗಿ ಆ ಭಾಗವು ಈಡಾಗಬಲ್ಲದಾಗಿರುತ್ತದೆ. ಆಂಟಿ ಆಕ್ಸಿಡೆಂಟ್ ಗಳು ವಿಷಾಣುಗಳ ವಿರೋಧಿಯಾಗಿ ಕಾರ್ಯನಿರ್ವಹಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತವೆ.

ದೇಹದಲ್ಲಿ ಕೆಲವೊಂದು ನಿರ್ದಿಷ್ಟ ಕಾರಣಗಳಿಂದ ವಿಷಾಣುಗಳು ಹೆಚ್ಚಾಗಬಹುದಾಗಿರುತ್ತದೆ. ಇವುಗಳು ಹೆಚ್ಚಾದಂತೆಲ್ಲ ರೋಗವು ಕೂಡ ಹೆಚ್ಚಾಗುತ್ತಾ ಸಾಗುತ್ತದೆ. ಆಂಟಿ ಆಕ್ಸಿಡೆಂಟ್ ಗಳು ವಿಶಾಣುಗಳ ವಿರೋಧಿಯಾಗಿ ಕೆಲಸವನ್ನು ಮಾಡಿ ದೇಹವನ್ನು ಆರೋಗ್ಯಕರ ಸ್ಥಿತಿಯಲ್ಲಿ ಇರಿಸುತ್ತವೆ. ಹೀಗಾಗಿ ಆರೋಗ್ಯದ ಜೊತೆಗೆ ದೈಹಿಕ ಕಾರ್ಯನಿರ್ವಹಣೆಗೆಗಳಿಗೂ ಕೂಡ ಆಂಟಿಆಕ್ಸಿಡೆಂಟ್ ಗಳು ಬೇಕಾಗಿರುತ್ತದೆ.

*ವಿಷಾಣುಗಳು (Toxins )ಹೆಚ್ಚಾಗಲು ಕಾರಣಗಳೇನು?*
ಇದಕ್ಕೆ ಹತ್ತಾರು ಕಾರಣಗಳಿರುತ್ತವೆ.
*ಉತ್ತಮ ಸತ್ವಯುತ ಆಹಾರ ಸೇವನೆ ಮಾಡದಿರುವುದು, ಕಲುಷಿತ ಆಹಾರ,ಗಾಳಿ,ನೀರು ಸೇವನೆ.
* ಧೂಮಪಾನ ಹಾಗೂ ಮದ್ಯಪಾನ, ಕಲುಷಿತ ಹವೆ,ವಾಯು ಮಾಲಿನ್ಯ ವಾಹನದ ಹೊಗೆ.
* ಆಹಾರವನ್ನು ಒಂದಕ್ಕಿಂತ ಹೆಚ್ಚು ಬಾರಿ ಪದೇ ಪದೇ ಬಿಸಿ ಮಾಡಿ ಸೇವಿಸುವುದು ಹಾಗೂ ದಿನಗಟ್ಟಲೆ ಫ್ರಿಡ್ಜ್ ನಲ್ಲಿ ಇಟ್ಟು ಅದನ್ನು ಬಿಸಿ ಮಾಡಿ ಸೇವಿಸುವುದು. ( ಬಿಸಿ ಮಾಡಿದ ಹಾಲು, ಎಣ್ಣೆ, ಅನ್ನ,ಸಾಂಬಾರು ನೀರು ಮತ್ತೆ ಮತ್ತೆ ಬಿಸಿ ಮಾಡುವುದು ). ಇದರಿಂದ ಸಣ್ಣ ಸತ್ವಯುತ ಅಂಶ ನಾಶವಾಗಿ ಉತ್ತಮ ಪೋಷಕಾಂಶ ದೇಹಕ್ಕೆ ದೊರಕದೆ ಅದು ವಿಷಾಣುವಾಗಿ ವರ್ತಿಸುವುದು.
* ಕಡಿಮೆ ನಾರಿನಂಶದ ಆಹಾರ ಸೇವನೆ.
* ಹೆಚ್ಚು ಕೊಲೆಸ್ಟ್ರಾಲ್ ದೇಹಕ್ಕೆ ಆಹಾರದ ಮೂಲಕ ದೇಹಕ್ಕೆ ಸೇರುತ್ತ ಹೋಗುವುದು.
* ಆಂಟಿ ಆಕ್ಸಿಡೆಂಟ್ ಅಂಶ ಕಡಿಮೆ ಇರುವ ಆಹಾರ ಸೇವನೆ ಮಾಡುವುದು.

ಉಪಯೋಗಗಳು:
*ದೇಹದಲ್ಲಿ ಯಾವುದೇ ದೀರ್ಘಕಾಲೀನ ಉರಿ-ಊತ ಆಗನಂತೆ ತಡೆಗಟ್ಟುವುದು.
,ಜೀವಕೋಶಗಳ ಹಾನಿಯನ್ನು ತಡೆಗಟ್ಟುವುದು, ಒಟ್ಟಾರೆ ಒಟ್ಟಾರೆ ಆರೋಗ್ಯವನ್ನು ಸಂರಕ್ಷಿಸುವುದು.

ಯಾವುದು ಆಂಟಿ ಆಕ್ಸಿಡೆಂಟ್ :
* ಸತು,ಮ್ಯಾಂಗನೀಸ್ ವಿಟಮಿನ್ ಎ. ಸಿ. ಇ. ತಾಮ್ರ, ಲೈಕೋಪಿನ್ ಲೂಟಿನ್, ಫ್ಲೆವೆನಾಯ್ಡ್, ಪಾಲಿಫಿನಾಲ್, ಸೆಲೆನಿಯಂ… ಅಂಶಗಳು.

ಉಪಯೋಗಗಳು:
*ಆಂಟಿ ಆಕ್ಸಿಡೆಂಟ್ ಗಳು ಆಹಾರದಲ್ಲಿ ಸೇವನೆ ದಿನನಿತ್ಯದಲ್ಲಿ ಬಳಸಿದಾಗ
ದೀರ್ಘಕಾಲಿನ ರೋಗಗಳಾದ ಹೃದ್ರೋಗ,ಬಿಪಿ, ಕಣ್ಣಿನ ಸಮಸ್ಯೆ ತಡೆಗಟ್ಟುತ್ತದೆ.

*ಅಲ್ಜಿಮರ್,ಮರೆವಿನ ಕಾಯಿಲೆ ಬಾರದಂತೆ ತಡೆಗಟ್ಟಬಹುದು.
* ಕ್ಯಾನ್ಸರ್ ನಿಯಂತ್ರಣ ಅಥವಾ ಬರುವ ಸಾಧ್ಯತೆ ಬಹಳಷ್ಟು ಕಡಿಮೆ.
* ಆರ್ಥ್ರೈಟಿಸ್ ಮೂಳೆ ಸಮಸ್ಯೆ ತಡೆಗಟ್ಟಲು.
* ಮುಪ್ಪು ಬೇಗ ಆವರಿಸದಿರಲು. ವೃದ್ಧಾಪ್ಯ ಮುಂದೂಡಲು.
*
ಆಂಟಿ ಆಕ್ಸಿಡೆಂಟ್ ಗಳು ಇರುವ ಆಹಾರ :
* ಅರಿಶಿಣ, ಶುಂಠಿ. ಬೆಳ್ಳುಳ್ಳಿ ಈರುಳ್ಳಿ ಹಸಿರು ಮೆಣಸಿನಕಾಯಿ, ಕ್ಯಾರೆಟ್,ಬಾದಾಮಿ ಕುಂಬಳಕಾಯಿ ಬೀಜಗಳು ಸೂರ್ಯಕಾಂತಿ ಬೀಜಗಳು.
* ಯಥೇಚ್ಛ ಧಾನ್ಯ ಬಳಕೆ.
* ಹಣ್ಣುಗಳು ಅದರಲ್ಲೂ ವಿಟಮಿನ್ ಸಿ ಹೆಚ್ಚಾಗಿರುವ ಹುಳಿ ಆಧಾರಿತ ಹಣ್ಣುಗಳಾದ ಸೀಬೆಹಣ್ಣು, ಬ್ಲಾಕ್ ಬೆರ್ರಿ, ಕಿತ್ತಳೆ, ನೆಲ್ಲಿಕಾಯಿ,ಲಿಂಬೆ…
* ಟೊಮೆಟೊ,ಹಸಿರು ಸೊಪ್ಪು ಮೊಳಕೆ ಕಟ್ಟಿದ ಕಾಳುಗಳು.
* ಮೀನಿನ ಎಣ್ಣೆ, ಮೀನು.

Share This Article