ಬೆಂಗಳೂರು: ಕಾಂಗ್ರೆಸ್ ನವರ ಪಾದಯಾತ್ರೆಗೆ ಹೊರಟೊದ್ದಾಗಲೇ ಸರ್ಕಾರ ಕೊರೊನಾ ಟಫ್ ರೂಲ್ಸ್ ಜಾರಿ ಮಾಡಿದ್ದು, ಈ ಬಗ್ಗೆ ಸಿದ್ದರಾಮಯ್ಯ ಗರಂ ಆಗಿದ್ದಾರೆ. ನಮ್ಮ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಾವೂ ಕೊರೊನಾ ನಿಯಮಗಳನ್ಬ ಪಾಲಿಸಿಕೊಂಡೆ ಪಾದಯಾತ್ರೆ ಮಾಡುತ್ತೇವೆ. ಎರಡೂವರೆ ವರ್ಷದಿಂದ ಬಿಜೆಪಿ ಸರ್ಕಾರ ಏನು ಮಾಡಿಲ್ಲ. ಬರೀ ಸುಳ್ಳು ಜಾಹೀರಾತನ್ನ ನೀಡಿಯೇ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ಯಾಕೇ ರಾಮನಗರಕ್ಕೆ ಮಾತ್ರ ನಿಷೇಧಾಜ್ಞೆ ಹೇರಿದ್ದಾರೆ..? ಹಾಗಾದ್ರೆ ಇದರ ಅರ್ಥ ಏನು ಎಂದು ಪ್ರಶ್ನಿಸಿದ್ದಾರೆ. 15 ಜನ ಪಾದಯಾತ್ರೆ ಮಾಡಿದ್ರೆ ಬಿಡ್ತೇವೆ ಅಂತ ಕಾರಜೋಳ ಹೇಳಿದ್ದಾರೆ. 15 ಜನ ಒಟ್ಟಿಗೆ ನಡೆದ್ರೆ ಅದು 144 ಸೆಕ್ಷನ್ ಉಲ್ಲಂಘನೆಯಾಗಲ್ವಾ..?
ನಾವೂ ಪಾದಯಾತ್ರೆ ಮಾಡಿಯೇ ಮಾಡ್ತೇವೆ. ಮೇಕೆದಾಟು ವಿಚಾರವಾಗಿ ಕೇಂದ್ರಕ್ಕೆ ಒತ್ತಾಯ ಮಾಡಿಯೇ ಇಲ್ಲ. ಯಾಕೆ ರಾಜಕೀಯ ಬಣ್ಣ ನೀಡುವ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಸರ್ಕಾರ ಬರೀ ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದೆ. ಬೊಮ್ಮಾಯಿ ಅವರೇ ನೀರಾವರಿ ಸಚಿವರಾಗಿದ್ದರು. ಅವರು ಏನು ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ.