ಬೆಂಗಳೂರು: ನಟ ದರ್ಶನ್ ಎರಡನೇ ಬಾರಿಗೆ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅವರನ್ನ ಮತ್ತೆ ಬಳ್ಳಾರಿಗೆ ಶಿಫ್ಟ್ ಮಾಡಬೇಕೆಂದು ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ಇಂದು ಕೋರ್ಟ್ ನಲ್ಲಿ ನಡೆದಿದೆ. ಈ ವೇಳೆ ದರ್ಶನ್ ಅವರು, ಬದುಕುವುದಕ್ಕೆ ಆಗ್ತಿಲ್ಲ, ವಿಷ ಕೊಟ್ಟು ಬಿಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈ ವೇಳೆ ದರ್ಶನ್ ಅವರಿಗೆ ಹಾಸಿಗೆ, ದಿಂಬು ನೀಡುವ ಬಗ್ಗೆಯೂ ಅರ್ಜಿ ವಿಚಾರಣೆ ನಡೆದಿದೆ. ಈ ವೇಳೆ ತನ್ನ ನೋವನ್ನ ಹೇಳಿಕೊಂಡ ದರ್ಶನ್, ನನಗೆ ಸ್ವಲ್ಪ ಪಾಯಿಸನ್ ಕೊಟ್ಟು ಬಿಡಿ. ಬಿಸಿಲು ನೋಡಿ ತುಂಬಾ ದಿನ ಆಯ್ತು. ಬಟ್ಟೆ ವಾಸನೆ ಬರ್ತಿದೆ. ಬದುಕಲು ಆಗುತ್ತಿಲ್ಲ ಇಲ್ಲಿ. ನನಗೆ ಒಬ್ಬನಿಗೆ ಪಾಯಿಸನ್ ಕೊಡಿ ಸಾಕು ಬೇರೆ ಯಾರಿಗೂ ಬೇಡ ಎಂದು ನ್ಯಾಯಾಧೀಶರ ಮುಂದೆ ದರ್ಶನ್ ಮನವಿ ಮಾಡಿದ್ದಾರೆ.
ದರ್ಶನ್ ಮಾತು ಕೇಳಿದ ನ್ಯಾಯಾಧೀಶರು, ಶಾಕ್ ಆಗಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿದ್ದು, ಅದೆಲ್ಲಾ ಆಗುವುದಿಲ್ಲ. ಜೈಲಿನ ಅಧಿಕಾರಿಗಳಿಗೆ ಸೂಚನೆ ಕೊಡ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿಕೆ ಮಾಡಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಮಧ್ಯಾಹ್ನ ವಿಚಾರಣೆ ನಡೆದ ಬಳಿಕ, ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿಯೇ ಇರ್ತಾರಾ ಅಥವಾ ಬಳ್ಳಾರಿಗೆ ಶಿಫ್ಟ್ ಆಗ್ತಾರಾ ನೋಡಬೇಕಿದೆ.






