ಬೆಂಗಳೂರು : ರಾಜ್ಯದ ಜನ ಈ ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ಅಂತೆಲ್ಲಾ ಕೇಳಿ ಕೇಳಿ ರೋಸಿ ಹೋಗಿದ್ದಾರೆ. ಸದ್ಯ ರಾಜ್ಯದಲ್ಲಿ ಕರೋನಾ ಮೂರನೇ ಅಲೆಯ ಭಯ ಶುರುವಾಗಿದೆ. ಅದರ ಜೊತೆ ಜೊತೆಗೆ ಒಮಿಕ್ರಾನ್ ಭೀತಿಯೂ ಆತಂಕ ಹುಟ್ಟಿಸಿದೆ.
ಒಮಿಕ್ರಾನ್ ಬಗ್ಗೆ ಸಚಿವ ಸುಧಾಕರ್ ಭಯ ಬೇಡ ಎಂದಿದ್ದಾರೆ. ಒಮಿಕ್ರಾನ್ ಗಂಟಲಲ್ಲೇ ಉಳಿಯುತ್ತೆ, ಶ್ವಾಸಕೋಶ ತಲುಪಲ್ಲ ಎಂದಿದ್ದಾರೆ. ಈ ಮಾತು ಕೇಳಿ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಆದರೀಗ WHO ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಕರೋನಾದಷ್ಟೇ ಒಮಿಕ್ರಾನ್ ಕೂಡ ಡೇಂಜರ್ ಎಂಬ ಮಾಹಿತಿಯನ್ನು ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಇದೀಗ ಒಮಿಕ್ರಾನ್ ಬಗ್ಗೆ ತಿಳಿಸಿದ್ದಾರೆ. ಒಮಿಕ್ರಾನ್ ಕೂಡ ಮಾರಾಣಾಂತಿಕವಾದದ್ದು. ಅದು ಕೂಡ ಮನುಷ್ಯರ ಪ್ರಾಣವನ್ನು ಕಳೆಯುತ್ತದೆ. ಡೆಲ್ಟಾಗಿಂತ ಕೊಂಚ ಕಡಿಮೆ ಅಪಾಯಕಾರಿ. ಹಾಗಂತ ಅದನ್ನು ನೆಗ್ಲೆಕ್ಟ್ ಮಾಡುವ ಹಾಗಿಲ್ಲ. ಎರಡು ಡೋಸ್ ವ್ಯಾಕ್ಸಿನ್ ಪಡೆದುಕೊಂಡಿರುವವರಿಗೆ ಹೆಚ್ಚು ಹಾನಿಯುಂಟು ಮಾಡಲ್ಲ ಎಂದಿದ್ದಾರೆ.