ಬೆಂಗಳೂರು: ಕೊರೊನಾ ದಿನೇ ದಿನೇ ಹೆಚ್ಚಳವಾಗುತ್ತಿದೆ. ಹೀಗಾಗಿ ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಮಾಡಲಾಗಿದೆ. ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಕೂಡ ಜಾರಿ ಮಾಡಲಾಗಿದೆ.
ಜನಸಾಮಾನ್ಯರಿಗೆ ಕೊರೊನಾಗಿಂತ ಈ ಸರ್ಕಾರದ ಟಫ್ ರೂಲ್ಸ್ ಹೆಚ್ಚು ಭಯಾನಕವಾಗಿದೆ. ಅದರಿಂದಲೇ ಯಾವಾಗ ಈ ಬಂಧನಮುಕ್ತವಾಗುತ್ತೆ ಅಂತ ಕಾಯ್ತಿದ್ದಾರೆ. ಈ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಎಷ್ಟು ದಿನ ಇರುತ್ತೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಈ ಸಂಬಂಧ ಮಾತನಾಡಿರುವ ಸಿಎಂ ಬೊಮ್ಮಾಯಿ ಅವರು, ಸದ್ಯಕ್ಕೆ ವೀಕೆಂಡ್ ಕರ್ಫ್ಯೂ ವಾಪಾಸ್ ತೆಗೆಯುವ ಮಾತೇ ಇಲ್ಲ ಎಂದಿದ್ದಾರೆ.
ಇಂದು ಸಿಎಂ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆ ಬಳಿಕ ಸಿಎಂ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ವೀಕೆಂಡ್ ಕರ್ಫ್ಯೂ ನಿಂದಾಗಿ ವಾಣಿಜ್ಯ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಂದಿನ ವಾರ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುತ್ತೆ.
ಸರ್ಕಾರದ ತೀರ್ಮನದ ಬಗ್ಗೆ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯದವೆಲ್ಲಾ ಕಡೆ ಸರ್ಕಾರ ಈ ನಿಯಮ ಜಾರಿ ಮಾಡಬೇಕೆಂಬುದು ಏನು ಇಲ್ಲ ಎಂದು ಹಲವರು ಆಕ್ರೋಶಿತರಾಗಿದ್ದರು. ಅಷ್ಟೇ ಅಲ್ಲ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಪಾದಯಾತ್ರೆ ತಡೆಯೋದಕ್ಕೆ ನಿಯಮ ತಂದಿದ್ದಾರೆ ಎಂದಿದ್ದಾರೆ. ಆದ್ರೆ ಜನರ ಆರೋಗ್ಯ ದೃಷ್ಟಿಯಿಂದ ತಂದಿರುವುದು ಎಂದಿದ್ದಾರೆ.