ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಕೊರೊನಾ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಈ ಮಧ್ಯೆ ಕಾಂಗ್ರೆಸ್ ಹೊರಟಿದ್ದ ಪಾದಯಾತ್ರೆ ಬಗ್ಗೆಯೂ ಗೊಂದಲವಿದೆ. ಇತ್ತ ರಾಜ್ಯ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿ, ಪ್ರತಿಭಟನೆ, ರ್ಯಾಲಿಗೆ ಅವಕಾಶವಿಲ್ಲ ಅಂದ್ರೆ ಅತ್ತ ಕಾಂಗ್ರೆಸ್ ನಾಯಕರು ನಾವೂ ನೀರಿಗಾಗಿ ಪಾದಯಾತ್ರೆ ಮಾಡಿಯೇ ಮಾಡ್ತೀವಿ ಎಂದು ಹಠ ತೊಟ್ಟಿದ್ದಾರೆ.
ಆದ್ರೆ ರಾಜ್ಯದಲ್ಲಿರುವ ನಿಯಮವನ್ನು ಅವರು ಮುರಿಯುವ ಹಾಗಿಲ್ಲ. ಹೀಗಾಗಿಯೇ ಕಾಂಗ್ರೆಸ್ ನಾಯಕರು ಫ್ಲ್ಯಾನ್ ಬಿ ಯನ್ನು ಕೂಡ ರೆಡಿ ಮಾಡಿಕೊಂಡಿದ್ದಾರೆ. ಪಾದಯಾತ್ರೆ ಕಡೆ ಕ್ಷಣದಲ್ಲಿ ನಡಿಗೆಯಾಗಿ ಬದಲಾಗಿದೆ.
ನೀರಿಗಾಗಿ ನಡಿಗೆ ಎಂಬ ಹೆಸರಿನಲ್ಲಿ ಅಂದುಕೊಂಡಿದ್ದನ್ನ ಸಾಧಿಸಲು ಸಿದ್ಧರಾಗಿದ್ದಾರೆ ಕಾಂಗ್ರೆಸ್ ನಾಯಕರು. ನಿಯಮ ಪಾಲನೆ ಮಾಡಲು ಕೇವಲ ನಾಯಕರು ಮಾತ್ರ ಪಾದಯಾತ್ರೆ ಮಾಡಲು ಫ್ಲ್ಯಾನ್ ಮಾಡಿಕೊಂಡಿದ್ದಾರೆ. ಮೊದಲಿಗೆ ಏಳು ಜನ ಕೈ ನಾಯಕರು ಪಾದಯಾತ್ರೆ ಮಾಡಲಿದ್ದಾರೆ. ಅದಕ್ಕೂ ಅನುಮತಿ ಸಿಗದೆ ಹೋದರೆ ಐವರು ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ಸಾಧ್ಯವಾಗದೆ ಹೋದಲ್ಲಿ ಓನ್ಲಜ ಸಿದ್ದು ಆಂಡ್ ಡಿಕೆಶಿ ನಡೆಯಲು ಶುರು ಮಾಡುತ್ತಾರೆ. ಇದನ್ನು ನಿಲ್ಲಿಸಲು ಯತ್ನಿಸಿದರೆ ಬಿಜೆಪಿ ವಿರುದ್ಧ ಪ್ರಹಾರ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.