ಮೈಸೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ ಅವರ ಆಯ್ಕೆಯನ್ನ ಬಿಜೆಪಿಗರು ಸೇರಿದಂತೆ ಹಲವರು ವಿರೋಧಿಸ್ತಾನೆ ಇದ್ದಾರೆ. ಅವರನ್ನ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು ರಾಜ್ಯ ಸರ್ಕಾರ. ಇಂದು ಸಿಎಂ ಸಿದ್ದರಾಮಯ್ಯ ಅವರಿಗೂ ಈ ಪ್ರಶ್ನೆ ಎದುರಾಗಿದೆ. ಬಾನು ಮುಷ್ತಾಕ ಅವರು ಅರಿಶಿನ – ಕುಂಕುಮದ ಬಗ್ಗೆ ಮಾತನಾಡಿದ್ದಾರೆ ಎಂದಾಗ ಸಿಎಂ ಸಿದ್ದರಾಮಯ್ಯ ಅವರು ಅದಕ್ಕೆ ಉತ್ತರಿಸಿದ್ದಾರೆ.
ಕನ್ನಡ ತಾಯಿಯ ಬಗ್ಗೆ ಗೌರವ ಇಲ್ಲದೆ ಮಾತನ್ನಾಡಿದ್ದಾರೆ ಎಂಬ ಮಾತಿಗೆ ಉತ್ತರಿಸಿದ ಸಿಎಂ, ಅದಕ್ಕೂ ಇದಕ್ಕೂ ಏನು ಸಂಬಂಧ. ಕನ್ನಡ ತಾಯಿ ಮೇಲೆ ಪ್ರೀತಿ ಇಲ್ಲದೆ ಅವರು ಕನ್ನಡದ ಪುಸ್ತಕಗಳನ್ನ ಬರೀತಾರಾ..? ಇದೇ ಹಣತೆ ಯಾವುದರಲ್ಲಿ ಬರೆದಿರೋದು. ಕನ್ನಡದ ಬಗ್ಗೆ ಅಭಿಮಾನ ಇಲ್ಲದೆ ಹೋದರೆ, ಪ್ರೀತಿ ಇಲ್ಲದೆ ಹೋದರೆ, ಗೌರವ ಇಲ್ಲದೆ ಹೋದರೆ ಕನ್ನಡದ ಪುಸ್ತಕಗಳನ್ನ ಬರೆಯುವುದಕ್ಕೆ ಸಾಧ್ಯನಾ..? ಅವರು ಎಲ್ಲಾ ಸಾಹಿತ್ಯ ರಚನೆ ಮಾಡಿರುವುದು ಕನ್ನಡದಲ್ಲಿ.
ಬಿಜೆಪಿ ನಾಯಕರು ಏನಾದ್ರು ಒಂದು ಕುಂಟು ನೆಪವನ್ನ ಹುಡುಕುತ್ತಲೇ ಇರುತ್ತಾರೆ. ನಾನು ಸ್ಪಷ್ಟವಾಗಿ ಹೇಳ್ತಾ ಇದ್ದೀನಿ. ಇದು ಒಂದು ನಾಡ ಹಬ್ಬ. ಈ ನಾಡ ಹಬ್ಬ ಉದ್ಘಾಟನೆ ಮಾಡುವುದಕ್ಕೆ ಆ ಧರ್ಮ ಈ ಧರ್ಮ ಅಂತ ಇಲ್ಲ. ಎಲ್ಲಾ ಧರ್ಮದವರು ಕೂಡ ಈ ಹಬ್ಬವನ್ನ ಆಚರಣೆ ಮಾಡ್ತಾರೆ. ದಸರಾ ಉದ್ಘಾಟನೆ ಮಾಡುವುದಕ್ಕೆ ಬಾನು ಮುಷ್ತಾಕ ಅವರನ್ನು ಕರೆದಿರುವುದು ಸೂಕ್ತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸ್ಪಷ್ಟ ಪಡಿಸಿದ್ದಾರೆ. ಬಾನು ಮುಷ್ತಾಕ ಅವರು ಉದ್ಘಾಟನೆ ಮಾಡಬಾರದು ಎಂದು ಸಾಕಷ್ಟು ಜನರಿಂದ ವಿರೋಧವಿದೆ.






