ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 30 : ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕಾರ ಭಾರತೀಯ ಸಹಯೋಗದೊಂದಿಗೆ ಕೃಷ್ಣ ಜನ್ಮಾಷ್ಟಮಿ ಯನ್ನು ಆಚರಿಸಲಾಯಿತು.
ಶಾಲೆಯ ಅಧ್ಯಕ್ಷರಾದ ಡಿಸ್ಟ್ರಿಕ್ಟ್ ಗವರ್ನರ್ ಡಿಸ್ಟ್ರಿಕ್ಟ್ ಆರ್ ಐ 3160 ಎಂ ಕೆ ರವೀಂದ್ರ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಉಪಾಧ್ಯಕ್ಷರಾದ ಮತ್ತು ಸಂಸ್ಕಾರ ಭಾರತಿ ಚಿತ್ರದುರ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ರೊಟೇರಿಯನ್ ಪಿ. ಹೆಚ್.ಎಫ್ ಉಮೇಶ್ ವಿ ತುಪ್ಪದ, ಕಾರ್ಯದರ್ಶಿ ಕಾರ್ತಿಕ್ ಎಂ, ಸಂಸ್ಕಾರ ಭಾರತಿ ಚಿತ್ರದುರ್ಗ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್, ದಕ್ಷಿಣ ಪ್ರಾಂತ್ಯದ ಮಾತೃಶಕ್ತಿಯ ಸಹ ಪ್ರಮುಖರಾದ ಶ್ರೀಮತಿ ವರಲಕ್ಷ್ಮಿ, ನಮ್ಮ ಶಾಲೆಯ ಖಜಂಚಿಗಳಾದ ಹಾಗೂ ಆಡಳಿತಾಧಿಕಾರಿಯಾದ ಶ್ರೀಮತಿ ಶ್ವೇತ ಕಾರ್ತಿಕ್, ಮುಖ್ಯ ಶಿಕ್ಷಕರಾದ ಶ್ರೀಮತಿ ನಂದಾ ಟಿ, ಶಿಕ್ಷಕರು ಉಪಸ್ಥಿತರಿದ್ದರು.
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಅಧ್ಯಾಪನ ಮಕ್ಕಳಿಂದ ವೇಷಭೂಷಣ ಸ್ಪರ್ಧೆಯನ್ನು ನಡೆಸಲಾಯಿತು.
ಪ್ರಥಮ ಬಹುಮಾನ – ಮನ್ವಿತ್ ಆರ್.ಎಂ.
ದ್ವಿತೀಯ ಬಹುಮಾನ – ರಿಷೇಬ್ ಆರ್
ತೃತೀಯ ಬಹುಮಾನ – ಸೋನಾಲಿಕ ಕೆ.ಬಿ. ಅವರಿಗೆ ಬಹುಮಾನವನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಸೋನಾಲಿಕ ಅವರಿಂದ ಪ್ರಾರ್ಥನೆ ಗೀತೆಯನ್ನು , ಶ್ರೀಮತಿ ಮಾನಸ ಎಲ್ಲ ಗಣ್ಯರನ್ನು ಸ್ವಾಗತಿಸಿದರು. ಸಂಸ್ಕಾರ ಭಾರತೀಯ ಗಣ್ಯರು ಸಂಸ್ಕಾರ ಭಾರತೀಯ ಧ್ಯೇಯ ಗೀತೆ ಗೀತೆಯನ್ನು ಹಾಡಿದರು. ಮುಖ್ಯ ಶಿಕ್ಷಕರಾದ ಶ್ರೀಮತಿ ನಂದ ಟಿ ರವರು ಪ್ರಾಸ್ತಾವಿಕ ನುಡಿಯನ್ನು ನುಡಿದರು. ಕಾರ್ಯದರ್ಶಿ ಕಾರ್ತಿಕ್ ವಂದನಾರ್ಪಣೆಯನ್ನು ನೆರವೇರಿಸಿದರು.






