ಬಾನು ಮುಷ್ತಾಕ್ ಅವರಿಂದಲೇ ದಸರಾ ಉದ್ಘಾಟನೆ : ಸಚಿವ ರಾಮಲಿಂಗಾ ರೆಡ್ಡಿ

1 Min Read

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 30 : ಈಗಾಗಲೇ ಬಿಜೆಪಿ ನಾಯಕರು ಸೇರಿದಂತೆ ಹಲವರಿಂದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಬೇಡ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಅಲ್ಲದೆ ಅವರೇ ಬೇಕು ಅನ್ನೋದಾದ್ರೆ ಬಾನು ಮುಷ್ತಾಕ್ ಅವರು ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕು. ಕುಂಕುಮ ಇಟ್ಟುಕೊಂಡು ಬರಲಿ ಎಂಬೆಲ್ಲಾ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ದಸರಾವನ್ನು ಬಾನು ಮುಷ್ತಾಕ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ.

 

ಹಿರಿಯೂರಲ್ಲಿ ಮಾತನಾಡಿದ ರಾಮಲಿಂಗರೆಡ್ಡಿ ಅವರು, ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಚಾಮುಂಡಿ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ. ಹಿಂದೂಗಳಿಗೆ ಸೇರಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರಿಗೆ ಚೇಷ್ಟೆ ಮಾಡದಿದ್ದರೆ ಅವರಿಗೆ ನಿದ್ದೆ ಬರಲ್ಲ.

ಚಾಮುಂಡೇಶ್ವರಿ ಪ್ರಾಧಿಕಾರ ಅಧಿಕೃತ ಹೌದೋ, ಅಲ್ಲವೋ ಎಂಬುದು ಕೋರ್ಟ್ ತೀರ್ಮಾನಿಸುತ್ತದೆ. ನಾಡಹಬ್ಬ ಏಳು ಕೋಟಿ ಜನರಿಗೆ ಸೇರಿರುವಂಥ ಹಬ್ಬ. ಬಿಎಸ್ವೈ ಕಾಲದಲ್ಲಿ ಅಬ್ದುಲ್ ಕಲಾಂಗೆ ಅಹ್ವಾನಿಸಿದ್ದರು. ಈ ಹಿಂದೆ ಕವಿ ನಿಸಾರ್ ಅಹ್ಮದ್ ದಸರಾ ಉದ್ಘಾಟಿಸಿದ್ದರು. ಆಗ ಬಿಜೆಪಿಗರು ಕುಂಕುಮ ಹಚ್ಚಿಕೊಂಡು ಬನ್ನಿ ಎಂದಿದ್ದರಾ? ಅವರವರ ಧರ್ಮ ಅವರವರಿಗೆ ಶ್ರೇಷ್ಠ. ಯಾವುದೇ ಧರ್ಮವನ್ನು ಯಾರೂ ದ್ವೇಷಿಸಬಾರದು. ಮತಕ್ಕಾಗಿ ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ಬಿಜೆಪಿಗರಿಗೆ ಜನ ನೆಮ್ಮದಿಯಿಂದ ಇರುವುದು ಬೇಕಾಗಿಲ್ಲ. ಬಿಜೆಪಿಯಿಂದ ಬೆಂಕಿ ಹಚ್ಚಿ ಬೇಳೆ ಕಾಳು ಬೇಯಿಸಿಕೊಳ್ಳುವ ಕೆಲಸ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಲ್ಲ. ಸಿಎಂ, ಡಿಸಿಎಂ ಈಗಾಗಲೇ ಬಾನು ಮುಷ್ತಾಕ್ ರಿಂದ ದಸರಾ ಉದ್ಘಾಟನೆಗೆ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *