ದಕ್ಷಿಣ ಕನ್ನಡ: ಸೌಜನ್ಯ ತಾಯಿ ಕುಸುಮಾವತಿ ಮಧ್ಯಾಹ್ನವೇ ಎಸ್ಐಟಿ ಕಚೇರಿಗೆ ಬಂದ ಕುಸುಮಾವತಿ ಚಿನ್ನಯ್ಯ ವಿರುದ್ಧ ದೂರು ಕೊಡಲು ನೋಡಿದರು. ಆದರೆ ಪೊಲೀಸರು, ಎಸ್ಐಟಿ ಭೇಟಿಗೆ ಅನುಮತಿ ನೀಡಿರಲಿಲ್ಲ. ಪುನಃ ಬಂದ ಕುಸುಮಾವತಿ ಕಡೆಗೂ ದೂರು ನೀಡಿದ್ದಾರೆ. ಈ ಮೂಲಕ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸೌಜನ್ಯ ನಿಗೂಢ ಸಾವಿನ ಬಗ್ಗೆ ಎಸ್ಪಿ ಸೈಮನ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ದೂರಿನ ಬಳಿಕ ಅಧಿಕಾರಿಗಳು ಹಿಂಬರಹ ಕೊಟ್ಟಿದ್ದಾರೆ. ತಾವೂ ನೀಡಿದ ಅರ್ಜಿಯನ್ನು ಪರಿಶೀಲಿಸುತ್ತೇವೆ. ದೂರಿನ ಅಂಶಗಳ ಬಗ್ಗೆ ಎಸ್ಐಟಿ ತನಿಖೆಯ ವೇಳೆ ಪರಿಗಣಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನಲ್ಲಿ ಚೆನ್ನಯ್ಯನ ವಿರುದ್ಧ ತನಿಖೆಗೆ ಕುಸಜಮಾವತಿ ಆಗ್ತಹಿಸಿದ್ದಾರೆ 2014ರಲ್ಲಿ ಚಿನ್ನಯ್ಯ, ಧರ್ಮಸ್ಥಳ ತೊರೆಯಲು ಸೌಜನ್ಯ ಕೊಲೆಯ ನಂತರದ ಘಟನೆಗಳೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಕ್ಕರ ಸಂಬಂಧಿಸಿದಂತೆ ತನಿಖೆಗೆ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಭೇಟಿ ನೀಡಿತ್ತು. ಆ ಅಧಿಕಾರಿಗಳು ಪಾಂಗಾಳಕ್ಕೆ ಬಂದು ಹೇಳಿಕೆಯನ್ನು ಪಡೆದಿದ್ದರು. ಆಗಸ್ಟ್ 13ರಂದು ಉಜಿರೆಗೆ ಬಂದು ಹೇಳಿಕೆ ನೀಡುವಂತೆ ತಿಳಿಸಿದ್ದರು. ಅದೇ ದಿನ ಚಿನ್ನಯ್ಯ ಅಕ್ಕ ರತ್ನ ಆಯೋಗಕ್ಕೆ ಹೇಳಿಕೆ ನೀಡಿರುವುದನ್ನು ನಾನು ಕೇಳಿಸಿಕೊಂಡೆ. ರವಿ ಪೂಜಾರಿ ಎಂಬಾತ ಸೌಜನ್ಯ ಕ*ಲೆ ಅ*ಅತ್ಯಾಚಾರಕ್ಕೆ ಕಾರಣರಾದವರು ಹೆಸರನ್ನು ಚಿನ್ನಯ್ಯಗೆ ಹೇಳಿದ್ದ. ಅಪರಾಧಿಗಳು ರವಿ ಪೂಜಾರಿಗೆ ಹಣ ಕೊಟ್ಟು, ನಂತರ ಕಚೇರಿಯಲ್ಲಿ ಕೊಂದಿದ್ದರು ಎಂದು ಚಿನ್ನನ ಅಕ್ಕ ರತ್ನ ವಿಚಾರಣೆಯಲ್ಲಿ ಹೇಳಿದ್ದರು ಎಂದು ದೂರು ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














