ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ ಅವರನ್ನೇ ರಾಜ್ಯ ಸರ್ಕಾರ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಆದರೆ ಬಿಜೆಪಿ ನಾಯಕರು ಇದನ್ನ ವಿರೋಧಿಸಿದ್ದಾರೆ. ಅವರು ಎಡಪಂಥೀಯ ಆಲೋಚನೆಗಳನ್ನ ಇಟ್ಟುಕೊಂಡಿದ್ದಾರೆ. ದೇವರ ಮೇಲೆ ನಂಬಿಕೆ ಇಲ್ಲ ಎಂಬ ವಿಚಾರಗಳನ್ನ ಹೇಳುವ ಮೂಲಕ ವಿರೋಧಿಸುತ್ತಿದ್ದಾರೆ. ಇದೀಗ ಈ ವಿರೋಧಕ್ಕೆ ಮೊದಲ ಬಾರಿಗೆ ಬಾನು ಮುಷ್ತಾಕ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನೀವೂ ತಾಯಿ ಚಾಮುಂಡೇಶ್ವರಿ ಎಂದು ಕರೆಯುತ್ತೀರಿ. ನಿಮ್ಮ ಭಾವನೆಗಳನ್ನೂ ನಾನು ಗೌರವಿಸುತ್ತೇನೆ. ದಸರಾ ಹಬ್ಬ ನಾನು ಪ್ರೀತಿಯಿಂದ ಭಾಗಿಯಾಗಿರುವ ಹಬ್ಬಗಳಲ್ಲಿ ಒಂದು. ನನ್ನ ತಂದೆ ಮತ್ತು ತಾಯಿಯೊಂದಿಗೆ ಹಕವು ಬಾರಿ ಜಂಬೂಸವಾರಿ ನೋಡುವುದಕ್ಕೆ ಹೋಗಿದಗದರ. ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತಸ ತಂದಿದೆ ಎಂದಿದ್ದಾರೆ.
ಕನ್ನಡಕ್ಕೆ ಅರಿಶಿನ, ಕುಂಕುಮ ಲೇಪಿಸಿ ಭುವನೇಶ್ವರಿಯಾಗಿ ಮಾಡಿಟ್ಟಿದ್ದೀರಿ. ನಾನು ಅಲ್ಪಸಂಖ್ಯಾತೆ. ಎಲ್ಲಿ ನಿಲ್ಲಬೇಕು ಎಂಬ ಅವರ ಹೇಳಿಕೆ ಸಾಕಷ್ಟು ವೈರಲ್ ಆಗಿತ್ತು. ಹೀಗಾಗಿ ಮೊದಲು ಬಾನು ಮುಷ್ತಾಕ ಅವರು ಯಾವ ಮನೋಭಾವದಲ್ಲಿದ್ದಾರೆ, ಚಾಮುಂಡೇಶ್ವರಿ ಮೇಲೆ ಭಕ್ತಿ ಇದೆಯಾ ಎಂಬುದೆಲ್ಲವನ್ನು ತಿಳಿಸಲಿ ಎಂದು ಒತ್ತಾಯಿಸಿದ್ದಾರೆ.






