ನವದೆಹಲಿ: ನಿನ್ನೆ ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಇಡೀ ರಾಜ್ಯವೇ ಮರೆಯದಂತ ಘಟನೆ ನಡೆದಿದೆ. ಅದು ಸಂಸದರು ಮತ್ತು ಸಚಿವರಿ, ಸಿಎಂ ಎದುರಲ್ಲೇ ಕಿತ್ತಾಡಿಕೊಂಡಿದ್ದು. ಆ ಘಟನೆಗೆ ಈಗಾಗಲೇ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇದೀಗ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ರಕ್ತದ ಬಗ್ಗೆ ಮಾತನಾಡಿದ್ದಾರೆ.
ಗಲಾಟೆ ವೇಳೆ ಅಶ್ವಥ್ ನಾರಾಯಣ ಅವರು ಬಳಸಿದ್ದ ಗಂಡಸ್ತನ ಪದದ ಬಗ್ಗೆ ಸಿ ಟಿ ರವಿ ಅವರು ಸಮರ್ಥಿಸಿಕೊಂಡಿದ್ದಾರೆ. ಗಂಡಸ್ತನ ಭಾಷೆ ಬಳಸುವುದು ಹಳೇ ಮೈಸೂರು ಭಾಗದಲ್ಲಿ ಸಹಜ. ಅದಕ್ಕೆ ತೋಳು ಏರಿಸಿಕೊಂಡು ಹೋದರೆ ಹೇಗೆ..? ಮಾತಿಗೆ ಮಾತಲ್ಲೇ ಉತ್ತರ ಕೊಡಬೇಕು. ಇದು ಪ್ರಜಾಪ್ರಭುತ್ವದ ಸೊಗಸು. ಡಿ ಕೆ ಸುರೇಶ್ ಸಚಿವರ ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ. ಗೂಂಡಾಗಿರಿ ಮೂಲಕ ಅಭಿಪ್ರಾಯ ಹತ್ತಿಕ್ಕಲು ಸಾಧ್ಯವಿಲ್ಲ.
ಸಂಸದರಿಗೆ ಅಭಿವೃದ್ಧಿ ಬಗ್ಗೆ ಹೇಳೋ ಅವಕಾಶವಿತ್ತು. ಅದನ್ನ ಬಿಟ್ಟು ಗೂಂಡಾಗಿರಿ ಮಾಡಿದ್ರೆ ಹೇಗೆ. ಡಿಕೆ ಸುರೇಶ್ ಅವರ ನಡೆಯನ್ನ ಸಿದ್ದರಾಮಯ್ಯ ಅವರು ಖಂಡಿಸುತ್ತಾರೆ ಎಂದು ಕೊಂಡೆ ಅವರು ಖಂಡಿಸಲೇ ಇಲ್ಲ. ಇನ್ನು ಡಿಕೆ ಶಿವಕುಮಾರ್ ಅವರು ತಮ್ಮನ ನಡೆ ಸಮರ್ಥಿಸುವ ಭರದಲ್ಲಿ ನಮ್ಮ ರಕ್ತವೇ ಬೇರೆ ಎಂದು ಹೇಳಿದ್ದಾರೆ. ಈ ಮೂಲಕ ಡಿ.ಕೆ ಶಿವಕುಮಾರ್ ತಮ್ಮ ರಕ್ತ ಅಪಾಯಕಾರಿ ರಕ್ತ ಎಂದು ತೋರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.