ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಸದ್ಯ ನಾಯಕತ್ವ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಸಿಎಂ ಸ್ಥಾನ ಬದಲಾಗುತ್ತೆ ಅಂತ ಒಂದಷ್ಟು ಆಕಾಂಕ್ಷಿಗಳು ಕ್ಯೂನಲ್ಲಿ ನಿಂತಿದ್ರೆ, ಬೊಮ್ಮಾಯಿ ಬೆಂಬಲಿಗರು ನೋ ವೇ ಚಾನ್ಸೆ ಇಲ್ಲ ಅಂತಾರೆ. ಇದೀಗ ಸಿ ಟಿ ರವಿ ಮಾತನಾಡಿದ್ದು, ಚುನಾವಣೆಯ ನಂತರ ನಾಯಕತ್ವ ಬದಲಾವಣೆ ಆಗಬಹುದು ಎಂದಿದ್ದಾರೆ.
ನಗರದಲ್ಲಿ ಮಾತನಾಡಿದ ಸಿ ಟಿ ರವಿ, ಸದ್ಯಕ್ಕೆ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೆಲಸಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಆದರೂ ಆಗಬಹುದು ಅಥವಾ ಬಳಿಕವೂ ಆಗಬಹುದು ಎಂದಿದ್ದಾರೆ.
ಜನ ಡೆವಲಪ್ಮೆಂಟ್ ಮಾಡೆಲ್ ಬಯಸುತ್ತಾರೆ. ಜೈಲ್ ಆಂಡ್ ಬೇಲ್ ಮಾಡೆಲ್ ಜನ ಬಯಸೋದಿಲ್ಲ, ಕರಪ್ಟ್ ಮಾಡೆಲ್ ಜನ ಬಯಸೋದಿಲ್ಲ. ಮಂತ್ರಿ ಸ್ಥಾನ ಬಿಟ್ಟುಕೊಡುವುದು ತ್ಯಾಗವೂ ಅಲ್ಲ, ಬಲಿದಾನವೂ ಅಲ್ಲ ಅವರವರ ಅವಶ್ಯಕತೆ ಇದ್ದಾಗ ಪಕ್ಷ ಜವಾಬ್ದಾರಿ ನೀಡುತ್ತದೆ, ಎಲ್ಲರೂ ಅದನ್ನು ಪಾಲಿಸುತ್ತಾರೆ. ಎಲ್ಲರ ಅಭಿಪ್ರಾಯಗಳನ್ನು ಪಡೆದು ಪಕ್ಷ ನಿರ್ಧಾರ ಮಾಡುತ್ತೆ ಎಂದಿದ್ದಾರೆ.