Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

Breaking News: ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ ಗೆ ಅರ್ಜಿ.. ಆ ಜ್ಯೋತಿಷಿ ಮಾತು ಸತ್ಯವಾಯ್ತಾ..?

---Advertisement---

 

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನಟ ಅಜಯ್ ರಾವ್ ಹಾಗೂ ಸ್ವಪ್ನ ರಾವ್ ನಡುವೆ ಎಲ್ಲವೂ ಸರಿ ಇಲ್ಲ ಎನ್ನಲಾಗುತ್ತಿದೆ. 11 ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ರೆಡಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದ್ರೆ ಇಬ್ಬರು ಡಿವೋರ್ಸ್ ಪಡೆಯುವುದಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.

ಅಜಯ್ ರಾವ್ ಹಾಗೂ ಸ್ವಪ್ನ ಪ್ರೀತಿಸಿ ಮದುವೆಯಾಗಿದ್ದವರು. 2014ರಲ್ಲಿ ಮದುವೆಯಾದವರು. ಇಬ್ಬರಿಗೂ ಮುದ್ದಾದ ಮಗಳಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ದಂಪತಿಯ ಫೋಟೋ, ವಿಡಿಯೋ ಹಾಕಿದಾಗ, ಕುಟುಂಬ ಸಮೇತ ಇರುವ ವಿಡಿಯೋಗಳನ್ನ ನೋಡಿದಾಗ ಸುಮಾರು ಜನ ಒಳ್ಳೆಯ ಕಮೆಂಟ್ ಗಳನ್ನ ಹಾಕ್ತಾ ಇದ್ರು. ಕುಟುಂಬ ಹೀಗಿರಬೇಕು, ದಾಂಪತ್ಯ ಈ ರೀತಿಯೇ ನಡೆಸಬೇಕು ಎಂಬೆಲ್ಲಾ ಕಮೆಂಟ್ ಗಳನ್ನ ಹಾಕ್ತಾ ಇದ್ದರು. ಈ ರೀತಿ ಸ್ಪೂರ್ತಿದಾಯಕವಾಗಿದ್ದ ಜೋಡಿ ಇದೀಗ ದೂರವಾಗುತ್ತಾ ಇದ್ದಾರೆ ಅನ್ನೋದೆ ಅಭಿಮಾನಿಗಳ ಬೇಸರ.

ಇತ್ತೀಚೆಗಷ್ಟೇ ಈ ದಂಪತಿ ಹೊಸ ಮನೆ ತೆಗೆದುಕೊಂಡು ಗೃಹ ಪ್ರವೇಶ ಕೂಡ ಮಾಡಿದ್ದರು. ಮದುವೆಯಾಗಿ ಹನ್ನೊಂದು ವರ್ಷವಾಗಿತ್ತು. ಈಗ ನೋಡಿದ್ರೆ ಡಿವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಜಯ್ ರಾವ್ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹೇಳಿದ್ದರು. ಜ್ಯೋತಿಷಿ ಒಬ್ಬರು ನಮ್ಮ ಡಿವೋರ್ಸ್ ಬಗ್ಗೆ ಹೇಳಿದ್ದರು. ಮದುವೆಯಾದ ಮುಹೂರ್ತ ಸರಿಯಿಲ್ಲ. ಒಂದೇ ವರ್ಷದಲ್ಲಿ ಡಿವೋರ್ಸ್ ಆಗ್ತೀರಾ ಅಂತ. ಆದರೆ ನನಗೆ ಜ್ಯೋತಿಷ್ಯ ಗೊತ್ತು. ಇಬ್ಬರು ಚೆನ್ನಾಗಿಯೆ ಬದುಕು ನಡೆಸುತ್ತಿದ್ದೀವಿ ಎಂದಿದ್ದರು. ಆದರೆ ಈಗ ನೋಡಿದ್ರೆ ಆ ಜ್ಯೋತಿಷಿ ಮಾತೇ ಸತ್ಯವಾಯ್ತ ಎಂಬ ಅನುಮಾನ ಕಾಡುತ್ತಿದೆ. ಈ ಡಿವೋರ್ಸ್ ವದಂತಿಗೆ ಅಜಯ್ ರಾವ್ ಆಗಲಿ, ಸ್ವಪ್ನ ಆಗಲಿ ಇನ್ನಿ ಅಧಿಕೃತವಾಗಿ ಹೇಳಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment