ತುಮಕೂರು: ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ಹೈಕಮಾಂಡ್ ವಜಾ ಮಾಡಿಸಿದೆ. ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು ರಾಜಣ್ಣ. ಆದರೂ ಈ ರೀತಿ ಆಗೋಯ್ತಲ್ಲ. ಸಿದ್ದರಾಮಯ್ಯ ಅವರು ಸಹಾಯ ಮಾಡಲಿಲ್ವಾ ಎಂಬ ಮಾತುಗಳು ಚರ್ಚೆಯಾದವು. ಇದೀಗ ಆ ಸಂಬಂಧ ಕೆ.ಎನ್.ರಾಜಣ್ಣ ಅವರೇ ಉತ್ತರ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ಅವರು ಎಲ್ಲವನ್ನು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಯಾಕಂದ್ರೆ ದೆಹಲಿಯಲ್ಲಿಯೂ ಕೆಲವರು ನನ್ನ ವಿರುದ್ಧವಾಗಿ ವ್ಯವಸ್ಥಿತವಾಗಿ ಮುಗಿಸಬೇಕು ಅಂತ ಇರಬೇಕು. ಯಾರನ್ನಾದ್ರೂ ವ್ಯವಸ್ಥಿತವಾಗಿ ಮುಗಿಸಬೇಕು ಅಂದ್ರೆ ನನಗೂ ವಿದ್ಯೆ ಬರಲ್ಲ ಅಂತ ಏನಿಲ್ಲ. ಬರುತ್ತೆ. ಅದನ್ನ ಮಾಡೋದಕ್ಕೆ ಸಮಯ ಯಾಕೆ ವ್ಯರ್ಥಾಡಬೇಕು ಅಂತ ಆ ಸಮಯವನ್ನ ಒಳ್ಳೆ ಕೆಲಸಕ್ಕೆ ಉಪಯೋಗ ಮಾಡುವುದಕ್ಕೆ ಹೊರಟಿದ್ದೇನೆ.
ಈ ವಿಚಾರ ಮುಖ್ಯಮಂತ್ರಿಗಳಿಗೇನೆ ಗೊತ್ತಿಲ್ಲ. ಅವರ ಮನೆಯಿಂದ ವಿಧಾನಸೌಧಕ್ಕೆ ಬರುವುದರೊಳಗೆ ನೀವೂ ಮಾಧ್ಯಮದವರು ತೋರಿಸಿದ್ದೀರಲ್ಲ ಅದೇ ವಿಷಯ. ಪಾಪ ಅವರು ಹೈಕಮಾಂಡ್ ಗೆ ಸಾಕಷ್ಟು ಮನವರಿಕೆ ಮಾಡುವುದಕ್ಕೆ ಟ್ರೈ ಮಾಡಿದ್ದಾರೆ. ಆದರೆ ಹೈಕಮಾಂಡ್ ಇಲ್ಲ ಈಗಾಗಲೇ ತೀರ್ಮಾನ ಆಗಿದೆ ಎಂದಿದ್ದಾರೆ. ಬಿಡಿ ಸರ್ ಹೋಗ್ಲಿ ಅಂತ ನಾನು ಹೇಳಿದೆ. ರಾಜ್ಯದಲ್ಲಿ ಒಳ್ಳೆ ಸರ್ಕಾರ ಇದೆ. ಗ್ಯಾರಂಟಿಗಳು ಜನರಿಗೆ ತಲುಪಿವೆ. ಅಭಿವೃದ್ಧಿ ಕೆಲಸಗಳು ನಾವಂದುಕೊಂಡಷ್ಟು ವೇಗವಾಗಿ ನಡೆಯದೆ ಇರಬಹುದು. ಆದರೆ ನಿಂತಿಲ್ಲ ಎಂದಿದ್ದಾರೆ.
ಇದೇ ವೇಳೆ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮಾತನಾಡಿದ್ದು, ಸಚಿವ ಸ್ಥಾನ ಸಮಯ ಬಂದಾಗ ತಗೋಳ್ತೀನಿ. ಅದರಲ್ಲಿ ಅನುಮಾನವೇ ಬೇಡ. ನಾನು ಚಿಕ್ಕವನಿದ್ದಾಗಿನಿಂದ ನಂಗೆ ಏನು ಬೇಕು, ಯಾವ ಥರ ಇರಬೇಕು ಅಂದುಕೊಂಡಿದ್ದೇನೋ ಅದೆಲ್ಲವನ್ನು ಸಾಧಿಸಿದ್ದೀನಿ. ಇದನ್ನು ಸಾಧಿಸ್ತೀನಿ ಎಂದಿದ್ದಾರೆ.






