ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೆಲ್ಲರ ಬೇಲ್ ಕ್ಯಾನ್ಸಲ್ ಆಗಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ ಈಗ. ದರ್ಶನ್ ಈ ಮೊದಲು ಜೈಲಿನಿಂದಾಗ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಕುಂತ್ರು ನಿಂತ್ರು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಸರ್ಜರಿ ಮಾಡಲೇಬೇಕಾದ ಅನಿವಾರ್ಯತೆ ಇದೆ ಅಂತ ವೈದ್ಯರು ವರದಿ ನೀಡಿದ ಕಾರಣ ಜಾಮೀನನ್ನ ನೀಡಿತ್ತು.
ಹೈಕೋರ್ಟ್ ನೀಡಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ಕ್ಯಾನ್ಸಲ್ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಆ ಬೆನ್ನು ನೋವಿನಿಂದ ಕಣ್ಣೀರು ಹಾಕಿದ್ದಾರಂತೆ. ಸದ್ಯ ದರ್ಶನ್, ಪ್ರದೂಶ್, ನಾಗರಾಜ್, ಲಕ್ಷ್ಮಣ್ ರನ್ನ ಒಂದೇ ಬ್ಯಾರಕ್ ನಲ್ಲಿ ಹಾಕಲಾಗಿದೆಯಂತೆ. ಈ ವೇಳೆ ಮತ್ತೆ ಪರಿಸ್ಥಿತಿ ಈ ರೀತಿ ಆಯ್ತಲ್ಲ. ಏನು ಮಾಡೋದು ಅಂತ ಎಲ್ಲರೂ ಮಾತಾಡಿಕೊಂಡು ಕೂತಿದ್ದರಂತೆ. ದರ್ಶನ್ ಮಾತ್ರ ಆ ಬೆನ್ನು ನೋವಿನಿಂದಲೇ ಸಂಕಟ ಪಟ್ಟು, ಸುಮ್ಮನಾದರಂತೆ.
ಇನ್ನುಳಿದಂತೆ ಪವಿತ್ರಾ ಗೌಡರನ್ನ ಮಹಿಳಾ ಬ್ಯಾರಕ್ ನಲ್ಲಿ ಹಾಕಲಾಗಿದ್ದು, ಅಲ್ಲಿ ಒಬ್ಬರೆ ಇದ್ದಾರೆ. ರಾತ್ರಿಯಿಡೀ ಊಟ ಮಾಡದೆ ಕಣ್ಣೀರು ಹಾಕುತ್ತಾ ಕೂತಿದ್ದರಂತೆ. ಊಟ ಮಾಡದೆ ಪರಿಸ್ಥಿತಿಯನ್ನ ನೆನದು ಕೂತಿದ್ದರಂತೆ. ಪೊಲೀಸರು ಮನೆಯಿಂದ ಕರೆ ತರುವಾಗಲು ಪವಿತ್ರಾ ಅವರ ತಾಯಿ ಕಣ್ಣೀರು ಹಾಕಿದರು. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ರದ್ದು ಮಾಡದಂತೆ ಪವಿತ್ರಾ ಪರ ವಕೀಲರು ಮನವಿಯನ್ನು ಮಾಡಿಕೊಂಡಿದ್ದರು. ವಯಸ್ಸಾದ ತಾಯಿಯನ್ನ ನೋಡಿಕೊಳ್ಳಬೇಕು, ಮಗಳನ್ನ ಸಾಕಬೇಕು ಎಂಬೆಲ್ಲಾ ಅಂಶವನ್ನ ಜಡ್ಜ್ ಮುಂದೆ ಇಟ್ಟಿದ್ದರು. ಆದರೂ ಸುಪ್ರೀಂ ಕೋರ್ಟ್ ಯಾವುದಕ್ಕೂ ಸೊಪ್ಪು ಹಾಕದೆ ಜಾಮೀನು ಕ್ಯಾನ್ಸಲ್ ಮಾಡಿದೆ.





