ಬೆಂಗಳೂರು: ಕೊರೊನಾ ನಿನ್ನೆ ಒಂದೇ ದಿನ ಸಾವಿರ ಕೇಸ್ ಗಳನ್ನ ಮುಟ್ಟಿದೆ. ಈ ಬೆನ್ನಲ್ಲೇ ಇಂದು ಕಂದಾಯ ಸಚಿವ ಆರ್ ಅಶೋಕ್ ಬೇರೆ ಲಾಕ್ಡೌನ್ ಮಾಡುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ. ಅವರ ಹೇಳಿಕೆಯಿಂದಾಗಿ ಜನ ಕಂಗಲಾಗಿದ್ದಾರೆ. ಇದೀಗ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಲಾಕ್ಡೌನ್ ಬಗ್ಗೆ ಮಾತನಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಬೆಳಗಾವಿಯಲ್ಲಿ ಟಫ್ ರೂಲ್ಸ್ ಜಾರಿ ಮಾಡಲಿದ್ದೇವೆ. ಕೊರೊನಾ ತಡೆಗೆ ಕೇವಲ ನಿರ್ಬಂಧವಲ್ಲ. ಕಟ್ಟು ನಿಟ್ಡಿನ ಕ್ರಮ ತೆಗೆದುಕೊಳ್ಳುತ್ತೇವೆ. ಕೊರೊನಾ ಟೆಸ್ಟ್ ಗಳನ್ನ ಕಡ್ಡಾಯಗೊಳಿಸಲಾಗಿದೆ. ಓಮಿಕ್ರಾನ್ ತಡೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಜನ ಕಳೆದ ಬಾರಿ ಸಹಕಾರ ನೀಡಿದ್ರು. ಈ ಬಾರಿಯೂ ಟಫ್ ರೂಲ್ಸ್ ಫಾಲೋ ಮಾಡ್ಬೇಕು. ಸಹಕಾರ ನೀಡದೆ ಇದ್ದರೆ ಲಾಕ್ಡೌನ್ ಮಾಡಬೇಕಾಗುತ್ತದೆ. ಲಾಕ್ಡೌನ್ ಮಾಡದಂತೆ ಕ್ರಮ ಜರುಗಿಸಲಾಗುತ್ತೆ. ಕೊರೊನಾ ಜಾಸ್ತಿಯಾದ್ರೆ ಲಾಕ್ಡೌನ್ ಮಾಡಲಾಗುತ್ತೆ ಎಂದಿದ್ದಾರೆ.
ಇನ್ನು ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಲಾಕ್ಡೌನ್ ಮಾಡಿದ್ದು, ಜನ ಸಾಮಾನ್ಯರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಈಗ ಮತ್ತೆ ಲಾಕ್ಡೌನ್ ಹೆಸರು ಕೇಳಿನೆ ಭಯಗೊಂಡಿದ್ದಾರೆ.