ಬೆಂಗಳೂರು: ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಗಳು ದಾಖಲಾಗಿದ್ದವು. ಇದೀಗ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಮತ್ತ ಲಾಕ್ಡೌನ್ ಮಾಡುವ ಬಗ್ಗೆ ಸಚಿವ ಆರ್ ಅಶೋಕ್ ಸುಳಿವು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್, ಕೊರೊನಾ ಮೂರನೆ ಅಲೆ ಬಗ್ಗೆ ಸಭೆ ಮಾಡೋದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಲಾಕ್ಡೌನ್ ಮಾಡಿದ್ದಾರೆ. ಈಗಾಗ್ಲೇ ಕೊರೊನಾ ಮೂರನೆ ಅಲೆ ಜಾಸ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಜನರ ಜೀವವನ್ನ ಕಾಪಾಡಬಹುದು ಎಂದಿದ್ದಾರೆ. 7 ನೇ ತಾರೀಖಿನಂದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಈಗಾಗ್ಲೇ 7 ನೇ ತಾರೀಖಿನವರೆಗೂ ನೈಟ್ ಕರ್ಫ್ಯೂ ಇದೆ. ಕಳೆದ ಬಾರಿ ಸಾವು ನೋವುಗಳ ಬಗ್ಗೆ ಗಮನ ಇದೆ. ಹೀಗಾಗಿ ಈ ಬಗ್ಗೆ ಈ ಬಾರಿ ಎಲ್ಲದ್ದಕ್ಕೂ ಸರ್ವಸನ್ನದ್ಧವಾಗಿದ್ದೇವೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ.
ಈಗಾಗ್ಲೇ ಜನ ಲಾಕ್ಡೌನ್ ನಿಂದಾಗಿ ಸಾಕಷ್ಟು ಪರದಾಟ ಪಟ್ಟಿದ್ದಾರೆ. ಸಂಕಷ್ಟ ಅನುಭವಿಸಿದ್ದಾರೆ. ಒಂದು ವೇಳೆ ಮತ್ತೆ ಲಾಕ್ಡೌನ್ ಮಾಡಿದ್ರೆ ಜನ ಇನ್ನಷ್ಟು ಕಷ್ಟದ ಸ್ಥಿತಿ ತಲುಪೋದು ಗ್ಯಾರಂಟಿ. ಈ ಆತಂಕ ಜನ ಸಾಮಾನ್ಯರಲ್ಲಿ ಹೆಚ್ಚಾಗಿದೆ.