ಚಳ್ಳಕೆರೆ : ಬಾರಿ ಮಳೆಗೆ ಮೆಕ್ಕೆಜೋಳ ಬೆಳೆಗೆ ಹಾನಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 09 : ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ಎರಡು ಗಂಟೆಗಳ ಕಾಲ ಬಾರಿ ಮಳೆ ಸುರಿದ್ದಿದ್ದು ಹುಲಿಕುಂಟೆ ರೈತ ದಯಾನಂದ ಎನ್ನುವವರಿಗೆ ಸೇರಿದ್ದ ಬೆಳಗೆರೆ ಕಾವಲಿಯಲ್ಲಿರುವ ಎರಡುವರೆ ಎಕರೆ ನೀರಾವರಿ ಜಮೀನಿನಲ್ಲಿ ಬೆಳೆಯಲಾಗಿದ್ದ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

ರೈತ ದಯಾನಂದ ಕೊಳವೆ ಬಾವಿ ನೀರನ್ನು ಹನಿ ತುಂತುರು ನೀರಾವರಿ ಸೌಲಭ್ಯದ ಮೂಲಕ ಎರಡುವರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಈಗ ಮೆಕ್ಕೆಜೋಳ ಕಟಾವಿಗೆ ಬಂದಿದ್ದು ಸುರಿದ ಭಾರಿ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಗೆ ಹಾನಿಯಾಗಿದ್ದು ಇದರಿಂದ ರೈತ ದಯಾನಂದ ಅವರು ಕಂಗಾಲಾಗಿದ್ದಾರೆ‌.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks