ಶಿವಮೊಗ್ಗ: ಮಾಮೂಲಿ ಹಳಿಗಳಲ್ಲಿಯೇ ರೈಲು ಬೋಗಿಗಳ ಸಂಪರ್ಕ ಕಳೆದುಕೊಂಡರೆ ದೊಡ್ಡ ಅನಾಹುತವೇ ಸಂಭವಿಸುತ್ತದೆ. ಅಂಥದ್ರಲ್ಲಿ ದೊಡ್ಡ ಸೇತುವೆ ಮೇಲೆ ಸಂಪರ್ಕ ಕಳೆದುಕೊಂಡರೆ ಅದರೊಳಗಿದ್ದ ಪ್ರಯಾಣಿಕರ ಪರಿಸ್ಥಿತಿ ಏನಾಗಬೇಡ. ಅಂಥದ್ದೊಂದು ಭಯದ ಪರಿಸ್ಥಿತಿ ನಿರ್ಮಾಣವಾಗಿದ್ದು ಶಿವಮೊಗ್ಗದಲ್ಲಿ.
ಶಿವಮೊಗ್ಗದ ತುಂಗಾ ಸೇತುವೆ ಮೇಲೆ ಈ ಘಟನೆ ನಡೆದಿದೆ. ಎರಡು ಕಡೆಯಲ್ಲೂ ನೀರು ತುಂಬಿತ್ತು. ಈ ಆತಂಕದ ಪರಿಸ್ಥಿತಿಯಲ್ಲಿ ಜನ ನಿಜಕ್ಕೂ ಜೀವ ಬಾಯಿಗೆ ಬಂದವರಂತ ಪರಿಸ್ಥಿತಿಯಲ್ಲಿಯೇ ಕುಳಿತಿದ್ದರು. ಯಾಕಂದ್ರೆ ಇಂಜಿನ್ ಬಿಟ್ಟು ಬೋಗಿಗಳು ಚಲಿಸಿದ್ದವು. ಸ್ವಲ್ಪ ದೂರ ಹೋದ ಮೇಲೆ ಇಂಜಿನ್ ಬೇರೆ, ಬೋಗಿಗಳು ಬೇರೆಯಾಗಿ ನಿಂತಿದ್ದವು. ಕೆಳಗೆ ಇಳಿಯುವುದಕ್ಕೂ ಜನರಿಗೆ ಸಾಧ್ಯವಾಗಿಲ್ಲ. ಅದು ಸೇತುವೆ ಮೇಲೆ ನಡೆದ ಘಟನೆ ಇದಾಗಿದೆ. ಆಮೇಲೆ ರೈಲ್ವೆ ಇಲಾಖೆ ಅಧಿಕಾರಿಗಳು ಬಂದು ಸಮಸ್ಯೆಯನ್ನ ಬಗೆಹರಿಸಿದರು.
ಸುಮಾರು 20 ನಿಮಿಷಗಳ ಕಾಲ ಬೋಗಿಯ ಸಂಪರ್ಕವೇ ಇಲ್ಲದಂತೆ ಇಂಜಿನ್ ನಿಂತಿತ್ತು. ಇಂಜಿನ್ ಸಂಪರ್ಕವೇ ಇಲ್ಲದೆ ಬೋಗಿಗಳು ನಿಂತಿದ್ದವು. ಏನಾದ್ರೂ ಹೆಚ್ಚು ಕಡಿಮೆಯಾಗಿ ಬಿಟ್ಟರೆ ಏನು ಮಾಡೋದು ಎಂಬ ಢವಢವ ರೈಲಿನ ಒಳಗಿದ್ದ ಪ್ರಯಾಣಿಕರಲ್ಲಿ ಇತ್ತು. ಅಲ್ಲಿನ ಪರಿಸ್ಥಿತಿಯನ್ನ ರೈಲ್ವೆ ಸಿಬ್ಬಂದಿಗೆ ಹೇಳಿದ ಮೇಲೆ ಅಲ್ಲಿಗೆ ಬಂದ ರೈಲ್ವೆ ಸಿಬ್ಬಂದಿ ಸಮಸ್ಯೆಯನ್ನ ಬಗೆಹರಿಸಿದರು. ಇಂಜಿನ್ ಹಾಗೂ ಬೋಗಿಗಳನ್ನು ಒಟ್ಟು ಮಾಡಿ, ಮತ್ತೆ ರೈಲು ರನ್ ಆಗುವಂತೆ ಮಾಡಿದರು. ಸಮಸ್ಯೆ ಪರಿಹಾರವಾದ ಬಳಿಕ ಅದರೊಳಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಅದರಲ್ಲೂ ಸೇತುವೆ ಮೇಲೆ ಆ ರೀತಿ ಸಮಸ್ಯೆಯಾದರೆ ಯಾರಿಗೆ ಆದರೂ ಭಯ ಆಗಲ್ವ. ಅದೃಷ್ಟವಶಾತ್ ಯಾವುದೇ ಸಮಸ್ಯೆ ಆಗಿಲ್ಲ.









