ಚಿತ್ರದುರ್ಗ | ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೇವೆಯಿಂದ ವಜಾ : ಡಾ. ಕೆ.ನಂದಿನಿದೇವಿ ಆದೇಶ

1 Min Read

ಚಿತ್ರದುರ್ಗ, (ಡಿಸೆಂಬರ್.31) : ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮ ಪಂಚಾಯಿತಿ ಗ್ರೇಡ್-1 ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಎಂ.ಎಸ್.ಮೋಕ್ಷಕುಮಾರ್ ಇವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಯಾದ ಡಾ; ಕೆ.ನಂದಿನಿದೇವಿ ಆದೇಶಿಸಿದ್ದಾರೆ.

ಇವರು ಅನಧಿಕೃತ ಗೈರು ಹಾಜರು ಹಾಗೂ ದುರ್ನಡತೆ ಸೇರಿದಂತೆ ಅನೇಕ ಭಾರಿ ಅನಧಿಕೃತ ನಡತೆಯಿಂದ ಸೇವೆಯಲ್ಲಿ ಹಲವು ಭಾರಿ ಎಚ್ಚರಿಕೆ, ವಾಗ್ದಂಡನೆಗೆ ಗುರಿಯಾಗಿರುವರು. 2013ರ ಸೆಪ್ಟೆಂಬರ್ ನಿಂದ 2014 ರ ಮೇ ವರೆಗೆ ಗೈರು ಹಾಜರಾಗಿದ್ದು ಈ ಸಮಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಗೈರು ಹಾಜರಿಗೆ ಸಂಬಂಧಿಸಿದಂತೆ ವೇತನ ನೀಡಲು ಮನವಿ ಮಾಡಿರುತ್ತಾರೆ. ಪರಿಶೀಲನೆ ವೇಳೆ ಇದು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ಕಂಡು ಬಂದಿರುತ್ತದೆ.

ಆದರೆ ನನಗೆ ವೇತನ ನೀಡಿರುವುದಿಲ್ಲ, ಇದಕ್ಕಾಗಿ ನನ್ನ ಕಿಡ್ನಿ ದಾನ ಮಾಡುವುದಾಗಿ ಟಿ.ವಿ.ಮತ್ತು ಪತ್ರಿಕೆಗಳಲ್ಲಿ ಸುದ್ದಿಯನ್ನು ನೀಡಲು ಪ್ರಕಟಣೆ ನೀಡಿದ್ದರು. ಮತ್ತು ಇವರಿಗೆ ಅವರ ದುರ್ನಡತೆ ಬಗ್ಗೆ ಹಲವು ಭಾರಿ ನೋಟಿಸ್ ನೀಡಿದ್ದರೂ ಸಮರ್ಪಕವಾದ ಉತ್ತರ ನೀಡದೆ ಅಸಂಬದ್ದವಾದ ಉತ್ತರವನ್ನು ನೀಡಿರುತ್ತಾರೆ.

ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಅವರು ನೀಡಿದ ಅಂತಿಮ ತನಿಖಾ ವರದಿಯನ್ವಯ ಎಂ.ಎಸ್.ಮೋಕ್ಷಕುಮಾರ್ ಇವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಡಾ. ಕೆ.ನಂದಿನಿದೇವಿ ಆದೇಶಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *