ಧಾರವಾಡ: ಕರ್ನಾಟಕದಲ್ಲಿರುವ ಎಂಇಎಸ್ ಸಂಘಟನೆಯನ್ನ ಬ್ಯಾನ್ ಮಾಡುವಂತೆ ಒತ್ತಾಯಿಸಿ ಇಂದು ಬಂದ್ ಗೆ ಕರೆ ನೀಡಿದ್ದನ್ನು ಹಿಂಪಡೆಯಲಾಗಿದೆ. ಆದ್ರೂ ಕೂಡ ಎಂಇಎಸ್ ವಿರುದ್ದ ಆಕ್ರೋಶ ಹೊರ ಹಾಕಿದ್ದು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದು, ಹರಾಜು ಹಾಕಿದ್ದಾರೆ.
ಜನಪ್ರತಿನಿಧಿಗಳ ಭಾವಚಿತ್ರಗಳನ್ನ ಹರಾಜು ಹಾಕಿದ್ದಾರೆ. ಇವರೆಲ್ಲಾ ಎಂಇಎಸ್ ಪರವಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ, ಅಭಯ್ ಪಾಟೀಲ, ಶಶಿಕಲಾ ಜೊಲ್ಲೆ ಸೇರಿದಂತೆ ಹಲವರ ಫೋಟೋಗಳನ್ನ ಹರಾಜು ಹಾಕಿದ್ದಾರೆ.
ಎಂಇಎಸ್ ಇಷ್ಟೆಲ್ಲಾ ಪುಂಡಾಟ ನಡೆಸಿದ್ರು ಕೂಡ, ಜನಪ್ರತಿನಿಧಿಗಳು ಮಾತ್ರ ಒಂದು ಮಾತು ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಜನಪ್ರತಿನಿಧಿಗಳು ಸೈಲೆಂಟ್ ಆಗಿರುವ ಕಾರಣ ಅವರೆಲ್ಲಾ ಎಂಇಎಸ್ ಪರವಾಗಿದ್ದಾರೆಂದು ಗರಂ ಆಗಿರುವ ಪ್ರತಿಭಟನಾಕಾರರು, ಆಕ್ರೋಶಗೊಂಡು ಭಾವಚಿತ್ರಗಳನ್ನು ಹರಾಜು ಹಾಕಿದ್ದಾರೆ.