ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಹೈಕೋರ್ಟ್ ನೀಡಿರುವ ಜಾಮೀನು ರದ್ತಿ ಮಾಡಬೇಕೆಂದು ರಾಜ್ಯ ಸರ್ಕಾರ ಪೊಲೀಸ್ ಇಲಾಖೆ ಸುಪ್ರೀಂ ಮೊರೆ ಹೋಗಿದೆ. ಇಂದು ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ತೀರ್ಪನ್ನ ತೀರ್ಪನ್ನ ಮುಂದಿನ ವಾರಕ್ಕೆ ಮುಂದೂಡಿಕೆ ಮಾಡಿದೆ. ಈ ಮೂಲಕ ಮತ್ತೊಂದು ವಾರ ದರ್ಶನ್ ಅಂಡ್ ಟೀಂಗೆ ರಿಲ್ಯಾಕ್ಸ್ ಸಿಕ್ಕಿದೆ.
ವಾದ ಕೇಳುತ್ತಿರುವಾಗ ಸುಪ್ರೀಂ ಕೋರ್ಟ್ ಪವಿತ್ರಾ ಗೌಡ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನ ಕೇಳಿದೆ. ಪವಿತ್ರಾ ಗೌಡ ದರ್ಶನ್ ಗೆ 50 ಬಾರಿ ಕಾಲ್ ಮಾಡಿದ್ದು ಯಾಕೆ..? ಪವಿತ್ರಾ ಗೌಡ ಮೊದಲ ಮದುವೆ ಡಿವೋರ್ಸ್ ಆಗಿದೆಯಾ..? ಪವಿತ್ರಾ ಗೌಡ ಏನು ಮಾಡುತ್ತಿರುವುದು ಎಂಬ ಕೆಲ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಪವಿತ್ರಾ ಗೌಡ ಪರ ವಕೀಲರು ಕಲಾವಿದೆ ಸ್ವಾಮಿ ಎಂದಿದ್ದಾರೆ. ನಂತರ ಹೈಕೋರ್ಟ್ ಮಾಡಿದ ತಪ್ಪನ್ನ ನಾವೂ ಮಾಡಲ್ಲ ಎಂದು ಸೂಕ್ಷ್ಮವಾಗಿ ಹೇಳಿದೆ. ಇದನ್ನು ಕೇಳಿದ ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಇನ್ನೊಂದು ವಾರಗಳ ಆರೋಪಿಗಳಿಗೆ ರಿಲ್ಯಾಕ್ಸ್ ನೀಡಲಾಗಿದೆ. ಬಳಿಕ ಮುಂದಿನ ವಾರ ತೀರ್ಪು ಏನು ಬರುತ್ತೆ ನೋಡಬೇಕಿದೆ. ಅಲ್ಲಿಯೂ ಬೇಲ್ ಗೆ ಅನುಮತಿ ಸಿಗುತ್ತಾ ಅಥವಾ ಜೈಲು ಫಿಕ್ಸ್ ಆಗುತ್ತಾ ಎಂಭುದೆಲ್ಲವನ್ನು ಮುಂದಿನ ವಾರದ ಸುಪ್ರೀಂ ತೀರ್ಪಿನಲ್ಲಿ ತೀರ್ಮಾನವಾಗಲಿದೆ. ಕಳೆದ ವರ್ಷ ಜೂನ್ ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ 17 ಜನರನ್ನ ಅರೆಸ್ಟ್ ಮಾಡಲಾಗಿತ್ತು.









