ಜುಲೈ 26 ರಂದು ಪದವಿ ನಂತರ ಮುಂದೇನು ? ವೃತ್ತಿ ಮಾರ್ಗದರ್ಶನ ಕುರಿತು ಡಾ. ಡಿ.ವಿ. ಗುರುಪ್ರಸಾದ್ ಅವರಿಂದ ಉಪನ್ಯಾಸ

1 Min Read

 

ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಎಸ್‌. ಆರ್. ಬಿ. ಎಂ. ಎಸ್. ರೋಟರಿ ಸೇವಾ ಭವನದಲ್ಲಿ ಇದೇ ಜುಲೈ 26 ರಂದು ಪದವಿ ನಂತರ ಮುಂದೇನು ? ವೃತ್ತಿ ಮಾರ್ಗದರ್ಶನ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಚಿತ್ರದುರ್ಗ ರೋಟರಿ ಟ್ರಸ್ಟ್, ರೋಟರಿ ಕ್ಲಬ್ ಚಿತ್ರದುರ್ಗ, ಆಶಾಕಿರಣ ಟ್ರಸ್ಟ್ ಚಿತ್ರದುರ್ಗ, ಯುವಜಯ ಫೌಂಡೇಶನ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ 2022-23, 2023-24 & 2024-25 ನೇ ಸಾಲಿನಲ್ಲಿ ಪದವೀಧರರಾದವರಿಗೆ ” CAREER GUIDANCE ( ವೃತ್ತಿ ಮಾರ್ಗದರ್ಶನ ), WHAT AFTER GRADUATION “- ವಿಷಯದ ಬಗ್ಗೆ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ ವನ್ನು ಅಯೋಗಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಖ್ಯಾತ ಲೇಖಕರೂ, ಪತ್ರಿಕಾ ಅಂಕಣಕಾರರೂ, ಉಪನ್ಯಾಸಕರೂ, ನುರಿತ ವಾಗ್ರಿಗಳೂ ಹಾಗೂ ನಿವೃತ್ತ ಪೊಲೀಸ್ ಮಹಾ ನಿರ್ದೇಶಕರೂ ಆದ ಡಾ. D. V. ಗುರುಪ್ರಸಾದ್, ಬೆಂಗಳೂರು ಇವರು ನಡೆಸಿಕೊಡಲಿದ್ದಾರೆ. ವಿಶೇಷವಾಗಿ ಪದವೀಧರರಿಗೆ ಅತ್ಯಂತ ಉಪಯುಕ್ತ ಮಾಹಿತಿ ಯಾಗಿದ್ದು ವೃತ್ತಿ ಪರ ಭವಿಷ್ಯಕ್ಕೆ ಪೂರಕವಾಗಿದ್ದುದರಿಂದ ನೂತನ ಪದವೀಧರರು ತಮ್ಮ ಪೋಷಕರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಲು ಆಯೋಜಕರು ಮನವಿ ಮಾಡಿರುತ್ತಾರೆ.

ಆಗಸ್ಟ್ 5 ರ ಮಂಗಳವಾರ ದಿಂದ ಇದೇ ಸ್ಥಳದಲ್ಲಿ ಆರಂಭವಾಗಲಿರುವ ಹತ್ತು ವಾರಗಳ ” CAREER CONNECT (corporate readiness training)” ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಆಸಕ್ತ ವಿದ್ಯಾರ್ಥಿ- ಪದವೀಧರರು ಕಾರ್ಯಾಗಾರಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು
ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಚೆಲುವರಾಯ ಗುಪ್ತ ಮೊ : 9902372619

Share This Article
Leave a Comment

Leave a Reply

Your email address will not be published. Required fields are marked *