ಸುದ್ದಿಒನ್, ಚಿತ್ರದುರ್ಗ, ಜುಲೈ. 22 : ನಶಿಸುತ್ತಿರುವ ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಕಳೆದ 39 ವರ್ಷಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ವೀರಗಾಸೆ ಸ್ಪರ್ಧೆಗಳು ಈ ಬಾರಿ ಅಗಸ್ಟ್ 10 ಮತ್ತು 11 ರಂದು ಸಿರಿಗೆರೆಯಲ್ಲಿ ನಡೆಯಲಿವೆ.
ಗುರುಶಾಂತ ದೇಶಿಕೇಂದ್ರ ಶ್ರೀಗಳ 87ನೆಯ ಶ್ರದ್ದಾಂಜಲಿ ಅಂಗವಾಗಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಯಾವುದೆ ಕಲಾತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸುವ ಎಲ್ಲಾ ಕಲಾ ತಂಡಗಳಿಗೆ ನೈಜ ಪ್ರಯಾಣದ ವೆಚ್ಛವನ್ನು ಭರಿಸಲಾಗುವುದು.
ವೀರಗಾಸೆ ಕಲೆಯ ನೈಜ ಪ್ರದರ್ಶನವನ್ನು ಮಾತ್ರ ಕಲಾವಿದರು ಪ್ರಸ್ತುತ ಪಡಿಸಬೇಕು. ಸ್ಪರ್ಧೆಯಲ್ಲಿ ಯಾವುದೇ ಪವಾಡಗಳನ್ನು ಪ್ರದರ್ಶನ ಮಾಡುವಂತಿಲ್ಲ. ನಾಲಿಗೆಯ ಮೇಲೆ ಕರ್ಪೂರ ಹಚ್ಚಿಕೊಂಡು ಬೆಳಗುವುದು, ಖಡ್ಗದಿಂದ ಅಕ್ಕಿ ತುಂಬಿದ ತಂಬಿಗೆಯನ್ನು ಮೇಲಕ್ಕೆತ್ತುವುದು, ತೆಂಗಿನಕಾಯಿಯನ್ನು ಖಡ್ಗದಿಂದ ಒಡೆಯುವ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ.
ಭಾಗವಹಿಸುವ ತಂಡಗಳು ತಮ್ಮ ತಂಡದ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಬಿ.ಎಸ್. ಮರುಳಸಿದ್ಧಯ್ಯ, ಅಧ್ಯಕ್ಷರು, ಅಣ್ಣನ ಬಳಗ, ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ 577 541 (ಮೊಬೈಲ್ ಸಂಖ್ಯೆ: : 99861 91968, 88616 47555, 99725 31504, 88619 54653) ಇವರನ್ನು ಸಂಪರ್ಕಿಸುವುದು.
















