ತುಮಕೂರಿನಲ್ಲಿ ಬೇಕರಿಗೆ ನುಗ್ಗಿದ ಲಾರಿ, ಸ್ಥಳದಲ್ಲಿಯೇ ಮೂವರು ಸಾವು : ಸಚಿವ ಪರಮೇಶ್ವರ್ ಸಂತಾಪ..!

1 Min Read

 

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಬೇಕರಿಗೆ ನುಗ್ಗಿದ ಪರಿಣಾಮ, ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಕೋಳಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಂಗಶಾಮಯ್ಯ ಹಾಗೂ ಬೈಲಪ್ಪ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಮಾಹಿತಿ ದೊರೆತಿಲ್ಲ. ಲಾರಿ ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಆ ಲಾರಿ ತೀರಾ ಹಳೆಯದಾಗಿತ್ತು. ಆದರೂ ಚಾಲಕ ಆ ಗಾಡಿಯನ್ನ ಓಡಿಸಿದ್ದಾನೆ. ಇದರ ಪರಿಣಾಮ ಲಾರಿ ಕಂಟ್ರೋಲ್ ಗೆ ಸಿಕ್ಕಿಲ್ಲ. ಲಾರಿ ಗುದ್ದಿದ ಪರಿಣಾಮ ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಪಟ್ಟರು ಸಹ ಆಗಲಿಲ್ಲ. ಆಂಬ್ಯುಲೆನ್ಸ್ ಗೆ ಕರೆ ಮಾಡಿದರು ತಕ್ಷಣ ಬರಲಿಲ್ಲ. ಇದು ಅವ್ಯವಸ್ಥಿತೆಗೆ ಹಿಡಿದ ಕೈಗನ್ನಡಿಯಂತೆ ಕಂಡಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯು ಸಿಗದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

 

ಈ ವಿಷಯ ತಿಳಿದ ಗೃಹ ಸಚಿವರಾದ ಜಿ ಪರಮೇಶ್ವರ್ ಅವರು, ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಗೊಬ್ಬರ ತುಂಬಿದ್ದ ಲಾರಿ ಅಂಗಡಿಗೆ ನುಗ್ಗಿದ ಪರಿಣಾಮ ಸಂಭವಿಸಿದ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿರುವ ಸುದ್ದಿ ತಿಳಿದು ಆಘಾತವಾಯಿತು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ. ದುಖತಪ್ತ ಕುಟುಂಬವರ್ಗದವರಿಗೆ ನನ್ನ ತೀವ್ರ ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ. ಎಲ್ಲಾ ಗ್ರಾಮದಲ್ಲೂ ವಾಹನಗಳು ಓಡಾಡುವಂತ ರಸ್ತೆಗಳಲ್ಲಿ ಹಂಪ್ಸ್ ಗಳನ್ನ ಹಾಕಿರ್ತಾರೆ. ಆದರೆ ಈ ಗ್ರಾಮದಲ್ಲಿ ಆ ರೀತಿಯ ಹಂಪ್ಸ್ ಗಳು ಇಲ್ಲವಾಗಿರೋ ಕಾರಣವೂ ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *