ಬೆಳಗಾವಿ: ಅಣ್ಣಾಮಲೈ ಅಧಿಕಾರದಲ್ಲಿದ್ದಾಗ ಉದ್ಯಮಿ ಆರ್ ಎನ್ ನಾಯಕ್ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಸದ್ಯ ಅಣ್ಣಾ ಮಲೈ ಅವರು ಸ್ವಯಂ ನಿವೃತ್ತಿ ಘೋಷಿಸಿಕೊಂಡಿದ್ದಾರೆ. ಆದ್ರೆ ಅವರ ಸಮಯದಲ್ಲಿದ್ದ ಪ್ರಕರಣಕ್ಕೆ ಈಗ ಸಾಕ್ಷ್ಯ ಹೇಳಿದ್ದಾರೆ.
ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಇಂದು ಸಾಕ್ಷಿ ಹೇಳಿದ್ದಾರೆ. ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ಸಾಕ್ಷಿ ನುಡಿದ್ದಾರೆ. 2015ರಲ್ಲಿ ಬನ್ನಂಜೆ ರಾಜನನ್ನು ಕೋಕಾ ಕಾಯ್ದೆಯಡಿ ಮೊರಾಕ್ಕೊದಲ್ಲಿ ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಕಳುಹಿಸಲಾಗಿತ್ತು. ಇನ್ನು ರಾಜ್ಯದಲ್ಲಿ ದಾಖಲಾದ ಮೊದಲ ಕೋಕಾ ಪ್ರಕರಣವಾಗಿತ್ತು.
ಬನ್ನಂಜೆ ರಾಜ ಜೈಲಿನಲ್ಲಿದ್ದರೂ ಸಹಚರರ ಮೂಲಕ ಆಗಾಗ ಉದ್ಯಮಿಗಳಿಗೆ ಬೆದರಿಕೆ ಹಾಕಿಸುತ್ತಿದ್ದ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಹಳೆ ಕೇಸ್ ಗೆ ಸಂಬಂಧಿಸಿದಂತೆ ಅಣ್ಣಾಮಲೈ ಸಾಕ್ಷಿ ನುಡಿದಿದ್ದಾರೆ. ಈ ವೇಳೆ ಎಡಿಜಿಪಿ ಪ್ರತಾಪ್ ರೆಡ್ಡಿ ಮತ್ತು ಭಾಸ್ಕರ್ ರಾವ್ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು.