ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ : ಜುಲೈ 23ರಂದು ವಾಹನಗಳ ಬಹಿರಂಗ ಹರಾಜು

1 Min Read

ಚಿತ್ರದುರ್ಗ. ಜುಲೈ19: ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಹರಾಜು ಪ್ರಕ್ರಿಯೆಯನ್ನು ಇದೇ ಜುಲೈ 23ರಂದು ನಡೆಸಲಾಗುವುದು.

ಚಿತ್ರದುರ್ಗ ಗ್ರಾಮಾಂತರ  ಪೊಲೀಸ್   ಠಾಣೆಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಅಮಾನತ್ತು ಪಡಿಸಿಕೊಂಡಿರುವ ವಾಹನಗಳನ್ನು ವಾಹನದ ಮಾಲೀಕರು ವಾಪಸ್ ಪಡೆದುಕೊಳ್ಳದೇ ಇರುವುದರಿಂದ 23 ಮೋಟಾರ್ ಸೈಕಲ್,  02 ಆಟೋ ಹಾಗೂ ಒಂದು ಆಲ್ಟೋ ಕಾರ್ ವಾಹನಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಇಲಾಖಾ ಮೇಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿಕೊಂಡು ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡಿದ್ದು, ಈ ವಾಹನಗಳನ್ನು ಬಹಿರಂಗ ಹರಾಜು ಪ್ರಕ್ರಿಯೆಯ ಇದೇ ಜುಲೈ 23ರಂದು ಬುಧವಾರ  ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು.
ಆಸಕ್ತರು ರೂ.10 ಸಾವಿರ ನಗದು ಮುಂಗಡವಾಗಿ ಪಾವತಿಸಿ, ಟೋಕನ್ ಪಡೆದುಕೊಂಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ  ಪೊಲೀಸ್   ನಿರೀಕ್ಷಕರು, ಗ್ರಾಮಾಂತರ  ಪೊಲೀಸ್   ಠಾಣೆ, ಚಿತ್ರದುರ್ಗ ಮೊಬೈಲ್ ಸಂಖ್ಯೆ 9480803131, 9480803148 ರವರನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks