ಭೂಖಂಡಗಳು ಹಿಂದೆ ಒಂದಕ್ಕೊಂದು ಬೆಸಿದಿದ್ದವೇ ? ಜೆ. ಪರಶುರಾಮ ಅವರ ವಿಶೇಷ ಲೇಖನ…!

ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 9448338821

ಸುದ್ದಿಒನ್
ವಿಶಾಲವಾದ, ದ್ರವ್ಯರಾಶಿಗಳಿಂದ ಕೂಡಿದ ಭೂಮಿಯ ಮೇಲ್ಮೈಭಾಗವನ್ನು ಭೂ ಖಂಡಗಳೆಂದು ಕರೆಯಲಾಗುತ್ತದೆ. ನೆಲ ಮತ್ತು ಜಲಗಳ ಒಟ್ಟು ರಾಶಿಯೇ ಭೂಗೋಳ. ಆಫ್ರಿಕ, ಉತ್ತರ ಅಮೇರಿಕ, ದ.ಅಮೇರಿಕಾ, ಆಸ್ಟ್ರೇಲಿಯ, ಯುರೋಪು, ಅಂಟಾರ್ಟಿಕ ಪ್ರದೇಶಗಳ ಭೂಗೋಳದ ದೊಡ್ಡದೊಡ್ಡ ಭೂಫಲಕಗಳು. ಈ ಖಂಡಗಳೆಲ್ಲವೂ ಮೂಲವಾಗಿ ಒಂದೇ ನೆಲದಿಂದ ಒಡೆದು ದೂರ ಸರಿದಿವೆ ಎಂದು ವಿಜ್ಞಾನಿಗಳು ವೈಜ್ಞಾನಿಕ ಆಧಾರಗಳಿಂದ ಧೃಡಪಡಿಸಿದ್ದಾರೆ. ಭೂಖಂಡಗಳು ನಿಶ್ಚಲವಲ್ಲ. ಹಿಂದೆ ಅವು ಅಲೆಮರಿಗಳಾಗಿ ಅಲೆದಿವೆ, ಈಗಲೂ ಫಲಕಗಳು ನಿಧಾನವಾಗಿ ಸರಿಯುತ್ತಿವೆ. ಮೇಲಿನ ಖಂಡಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಉತ್ತರದೆಡೆಗೆ ಅವು ವಿಶಾಲವಾಗಿವೆ. ದಕ್ಷಿಣಕ್ಕೆ ಹೆÇೀದಂತೆ ಗಾತ್ರ ಕಿರಿದಾಗುತ್ತದೆ. ಈ ಕಿರಿದಾದ ಭಾಗಕ್ಕೆ ಹೆÇಂದಿಕೊಂಡಂತೆ ದ್ವೀಪವೋ, ದ್ವೀಪಸ್ತೋಮನೋ ನೆಲೆಯಾಗಿವೆ. ಇದರಿಂದ ಭೂಖಂಡಗಳು ದಕ್ಷಿಣದಿಂದ ಉತ್ತರ ಕಡೆಗೆ ಸಾಗುತ್ತವೆ.

ಆಫ್ರಿಕ ಖಂಡದ ಪಶ್ಚಿಮ ತೀರ, ದಕ್ಷಿಣ ಅಮೇರಿಕದ ಪೂರ್ವ ತೀರಗಳನ್ನು ಒಂದರ ಪಕ್ಕದಲ್ಲಿ ಒಂದರಂತೆ ಕೂಡಿಸಿದರೆ ಅವು ಎಷ್ಟು ನಿಚ್ಚಳವಾಗಿ ತೋರುತ್ತವೆಂದರೆ ಗರಗಸದಲ್ಲಿ ಕೊಯ್ದ ಮರದ ತುಂಡುಗಳನ್ನು ಜೋಡಿಸಿದಂತೆ ಕಾಣಿಸುತ್ತವೆ. 1912ರಲ್ಲಿ ಜರ್ಮನಿಯ ಹವಮಾನ ಶಾಸ್ತ್ರಜ್ಞ ‘ಅಲ್ಫೆಡ್‍ವೆಗನರ್’ ಎಂಬಾತನು ಭೂಫಲಕಗಳ ಸಂಚಲನೆಯ ಕುರಿತಾಗಿ ತನ್ನ ಸಿದ್ಧಾಂತವನ್ನು ಮಂಡಿಸಿದರು.

ಮೊದಲೊಂದು ಕಾಲದಲ್ಲಿ ಎಲ್ಲಾ ಖಂಡಗಳು ಸೇರಿ ಒಂದು ಬೃಹದಾಕಾರದ ಭೂಭಾಗವು ಇದ್ದಿರಬಹÅದೆಂದು ವಾದಿಸಿದರು. ಇಂತಹ ಭೂಭಾಗವನ್ನು ‘ಪ್ಯಾಂಜಿಯಾ’ ಎಂದು ಕರೆದರು. ಪ್ಯಾಂಜೀಯಾವನ್ನು ‘ಪಾಂಥಲಸ್ನಿ’ ಎನ್ನುವ ಹೆಸರಿನ ಸಾಗರವು ಸುತ್ತುವರೆದಿತ್ತು. ‘ಪಾಂಥಲಸ್ನಿ’ ಸಾಗರದ ಉತ್ತರ ಭಾಗವನ್ನು ‘ಲಾರೇಷಿಯಾ’ ಎಂದು, ದಕ್ಷಿಣ ಭಾಗವನ್ನು ‘ಗೋಂಡ್ವಾನ’ ಎಂದೂ ಕರೆಯಲಾಯಿತು.

ಒಂದು ಬಿಲಿಯನ್ ವರ್ಷಗಳ ಕಾಲ ಎಲ್ಲಾ ಭೂಖಂಡಗಳೂ ಸಹ ಒಂದೇ ಸಮನಾಗಿದ್ದರಬಹÅದೆಂದು ಊಹಿಸಲಾಗಿದೆ. ಅನಂತರ ಭೂಖಂಡಗಳ ಚಲನೆ ಪ್ರಾರಂಭವಾಯಿತು. ಭೂಖಂಡಗಳ ಚಲನೆಯ ಕುರಿತಾಗಿ ವೈಜ್ಞಾನಿಕವಾಗಿ ಅಧ್ಯಯನ ಪ್ರಕಾರ 50 ದಶಲಕ್ಷ ವರ್ಷಗಳ ನಂತರ ಅಟ್ಲಾಂಟಿಕ್ ಸಾಗರ ವಿಸ್ತಾರಗೊಳ್ಳಬಹÅದೆಂದು ಊಹಿಸಲಾಗಿದೆ. ಫೆಸಿಫಿಕ್ ಸಾಗರ ಸಂಕುಚಿತಗೊಳ್ಳಬಹುದು. ಆಸ್ಟ್ರೇಲಿಯಾ ಏಷ್ಯಾ ಖಂಡದ ಸನಿಹಕ್ಕೆ ಬರಬಹುದು. ಕೆಂಪು ಸಮುದ್ರವು ವಿಸ್ತಾರಗೊಳ್ಳಬಹುದು. ಅರಬ್ ಖಾರಿಯು ಅದೃಶ್ಯವಾಗಬಹುದು. ಇಂದಿನ ಭೂಖಂಡಗಳು ಪ್ರತಿವರ್ಷ 15 ಸೆಂ.ಮೀ.ಗಳಷ್ಟು ದೂರ ಸರಿಯುತ್ತಿರುವುದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಭೂಮಿಯ ಇತಿಹಾಸ 4600 ಮಿಲಿಯನ್ ವರ್ಷಗಳ ಮೊದಲು ಪ್ರಾರಂಭವಾಯಿತು. ಸುಮಾರು 1.6 ಮಿಲಿಯನ್ ವರ್ಷಗಳ ಮೊದಲು ಮಾನವನ ಪೂರ್ವಜರ ಉದಯವು ಭೂಮಿಯ ಮೇಲೆ ಉಂಟಾಯಿತು. ಸುಮಾರು 205 ಮಿಲಿಯನ್ ವರ್ಷಗಳ ಮೊದಲು ಸಂಪೂರ್ಣ ಭೂಮಂಡಲವು ಡೈನೋಸಾರ್‍ಗಳಿಂದ ತುಂಬಿ ಹೋಗಿತ್ತು. ಸುಮಾರು 355 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಭೂಮೇಲ್ಮೈ ದಟ್ಟವಾದ ಅರಣ್ಯಗಳಿಂದ ಆವೃತವಾಗಿತ್ತು. 250 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಸಾಗರಗಳು ಮತ್ತು ಸಮುದ್ರಗಳಲ್ಲಿ ತಿಮಿಂಗಿಲಗಳಂತಹ ಜಲಚರಗಳ ಉಗಮವಾಯಿತು.

ಭೂಪಲಕಗಳು ಚಲಿಸುವಾಗ ಒಂದಕ್ಕೊಂದು ಘರ್ಷಣೆ ಹೊಂದಿ ಶಾಖ ಮತ್ತು ಒತ್ತಡ ಹೆಚ್ಚಾಗಿ ಕೆಲವು ಪ್ರದೇಶಗಳಲ್ಲಿ ಅಸಮತೋಲನ ಉಂಟಾಗಿ, ಇದರ ಪರಿಣಾಮವಾಗಿ ಭೂಕಂಪಗಳು ಮತ್ತು ಭೂಕುಸಿತಗಳು ಸಂಭವಿಸುತ್ತವೆ.
ಭೂಮಿಯ ಇತಿಹಾಸ ಕೌತುಕಪೂರ್ಣ, ಅತ್ಯಂತ ಕುತೂಹಲಕಾರಿ, ಶಿಲಾರಚನೆಗಳು, ಪಳೆಯುಳಿಕೆಗಳು ಭೂಮಿಯ ಇತಿಹಾಸವನ್ನು ಅಧ್ಯಯನ ಮಾಡುವಲ್ಲಿ ಸಹಕಾರಿಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *