Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ 70 ರೂ.ಗೆ ಮದ್ಯ ಸಿಗುವಂತೆ ಮಾಡ್ತಾರಂತೆ ಬಿಜೆಪಿ ಮುಖಂಡ..!

Facebook
Twitter
Telegram
WhatsApp

ಅಮರಾವತಿ: ಚುನಾವಣೆ ಹತ್ತಿರ ಬಂದಾಗ ರಾಜಕೀಯ ನಾಯಕರು ಜನರಿಗೆ ಆಶ್ವಾಸನೆ ನೀಡೋದು ಸಹಜ. ಆ ಪ್ರಣಾಳಿಕೆಯಲ್ಲಿ ಜನರಿಗೆ ಏನು ಬೇಕೋ ಆ ಅಗತ್ಯ ಸೇವೆಗಳ ಮೇಲೆ ಆಶ್ವಾಸಬೆ ನೀಡುತ್ತಾರೆ. ಅಭಿವೃದ್ಧಿ ಬಗ್ಗೆ ಹೆಚ್ಚು ರಾಜಕಾರಣಿಗಳು ಆಶ್ವಾಸನೆ ನೀಡಿದ್ರೆ, ವಿಜಯವಾಡದಲ್ಲಿ ಬಿಜೆಪಿ ಮುಖಂಡರೊಬ್ಬರು ಎಣ್ಣೆ ಪ್ರಿಯರಿಗೆ ಇಷ್ಟವಾಗುವಂತೆ ಯೋಜನೆ ತರಲು ಹೊರಟಿದ್ದಾರೆ.

ಆಂಧ್ರಪ್ರದೇಶದಲ್ಲಿ 2024ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ತಂದರೆ ಕೇವಲ 70 ರೂಪಾಯಿಗೆ ಮದ್ಯ ಸಿಗುವಂತೆ ಮಾಡ್ತೇನೆ ಅಂತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸೋಮು ವೀರಜ್ಜು ಆಶ್ವಾಸನೆ ನೀಡಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಖಜಾನೆಯಲ್ಲಿ ಸಾಕಷ್ಟು ಹಣವಿದ್ದರೆ 50 ರೂಪಾಯಿಗೆ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ.

ಇದೇ ವೇಳೆ ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ವೀರಜ್ಜು, ಅಪಾರ ಸಂಪನ್ಮೂಲ, ಸಂಪತ್ತು ಇದೆ.  ಆದರೆ ಯಾವುದೇ ಅಭಿವೃದ್ಧಿಯನ್ನೂ ಕಾಣುತ್ತಿಲ್ಲ. ಇದಕ್ಕೆ ಕಾರಣ ಆಂಧ್ರವನ್ನು ಆಳಿದ ರಾಜಕೀಯ ಪಕ್ಷಗಳು ಎಂದು ವೈಎಸ್​ಆರ್ ಕಾಂಗ್ರೆಸ್​ ಮತ್ತು ತೆಲುಗು ದೇಸಂ ಪಕ್ಷಗಳನ್ನು ದೂಷಿಸಿದರು. ಈ ರಾಜ್ಯದಲ್ಲಿ ಕೋಟ್ಯಂತರ ಜನರು ಮದ್ಯ ಸೇವನೆ ಮಾಡುತ್ತಾರೆ ಎಂಬುದು ನನಗೆ ಗೊತ್ತು. ನೀವು ನಮ್ಮ ಬಿಜೆಪಿಗೆ ಮತ ಹಾಕಿ. ನಾವು ಸರ್ಕಾರ ರಚನೆ ಮಾಡಿದರೆ ಖಂಡಿತವಾಗಿಯೂ ಕಡಿಮೆ ಬೆಲೆಗೆ ಮದ್ಯ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು

ಈ ರಾಶಿಯ ಹೈನುಗಾರಿಕೆ, ಹೋಟೆಲ್ ಮತ್ತು ಎಲ್ಲಾ ನಮೂನೆಯ ವ್ಯಾಪಾರಸ್ಥರು ಪೈಪೋಟಿ ಎದುರಿಸುವರು, ಭಾನುವಾರ ರಾಶಿ ಭವಿಷ್ಯ -ಏಪ್ರಿಲ್-28,2024 ಸೂರ್ಯೋದಯ: 05:55, ಸೂರ್ಯಾಸ್ತ : 06:31 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ

ಯರೇಹಳ್ಳಿಯಲ್ಲಿ ಮತದಾನ ಬಹಿಷ್ಕಾರ : ಮರು ಮತದಾನ ನಡೆಸಿ, ವಾರದೊಳಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ : ಕರುನಾಡ ವಿಜಯಸೇನೆ ಒತ್ತಾಯ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552   ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.27  : ಮೂಲಭೂತ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಯರೇಹಳ್ಳಿ ಗ್ರಾಮಸ್ಥರು ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ

error: Content is protected !!