ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜುಲೈ. 17 : ನಗರದ ನಾಗರೀಕರಿಗೆ ಹಾಗೂ ಶಾಲಾ ಮಕ್ಕಳಿಗೆ ಜನವಸತಿಗಳಿಗೆ ಧೂಳಿನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲಾವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ಚಳ್ಳಕೆರೆ ನಾಗರಿಕ ಹಿತ ರಕ್ಷಣ ವೇದಿಕೆ ವತಿಯಿಂದ ನಗರದ ಪಾವಗಡ ರಸ್ತೆಯ ರೈಲ್ವೆ ಗೇಟ್ ಸಮೀಪ ಮೈನ್ಸ್ ಸಾಗಾಟ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲಿಸಿ ಅವರು ಮಾತನಾಡಿದರು. ಮೈನ್ಸ್ ಧೂಳಿನಿಂದ ಜನರಿಗೆ ಆರೋಗ್ಯದ
ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ ಕೊಡಲೇ ಇಲ್ಲಿ ಲೋಡಿಂಗ್ ಅನ್ ಲೋಡಿಂಗ್ ನಿಲ್ಲಿಸಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡಬೇಕು. ಸಾರ್ವಜನಿಕರು ಬಂದು ಹೋಗುವ ರೈಲ್ವೆ ನಿಲ್ದಾಣದಲ್ಲಿ ಹೀಗೆ ಮೈನ್ಸ್ ತುಂಬುವುದು, ತಂದು ಹಾಕುವುದು ಮಾಡಿದರೆ ಪ್ರಯಾಣಿಕರಿಗೆ ಹಾಗೂ ಇಲ್ಲಿನ ಜನರಿಗೆ ತೊಂದರೆ ಆಗುತ್ತದೆ.ಇಂದಿನಿಂದ ಇದು ನಿಲ್ಲಬೇಕು ಎಂದು ಸಾರ್ವಜನಿಕರು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹೋರಾಟವನ್ನು ತೀವ್ರ ಗೊಳಿಸುತ್ತೇವೆ. ಉಗ್ರ ಹೋರಾಟ ಮಾಡುತ್ತೆವೆ. ರಸ್ತೆ ತಡೆ ಮಾಡ್ತೇವೆ. ರೈಲ್ವೆ ಸ್ಟೇಷನ್ ನಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ ಮಾತನಾಡಿದರು. ಚಳ್ಳಕೆರೆ ಮಂಡಲ ಅಧ್ಯಕ್ಷರಾದ ಬಿಎಂ ಸುರೇಶ್, ಬಿಜೆಪಿ ಮುಖಂಡರಾದ ಜಯಪಾಲಯ್ಯ, ಎಬಿವಿಪಿ ಮಂಜುನಾಥ್, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಈಶ್ವರ್ ನಾಯಕ ಸೋಮಶೇಖರ ಮಂಡಿಮಠ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಾಗರೀಕ ಹಿತ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ನಾಗರಿಕರು ಇದ್ದರು.






