ಮಂಡ್ಯ : ಮಾಜಿ ಸಿಎಂ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡುವಾಗ, ಸಚಿವ ಈಶ್ವರಪ್ಪ ಪೆದ್ದ ಎಂದಿದ್ದಾರೆ.
ಜಿಲ್ಲೆಯ ಶಿವಪುರದಲ್ಲಿ ಮಾತನಾಡಿದ ಅವರು, ನೀವೂ ಆರ್ ಎಸ್ ಎಸ್ ನವರ ಕೈಗೊಂಬೆಯೆಂದಾಗ ಈಶ್ವರಪ್ಪ ಒಪ್ಪಲಿಲ್ಲ. ಅವರೊಬ್ಬ ಪೆದ್ದ. ಅದಾದ ಮೇಲೆ ಸದನದಲ್ಲಿ ಈಶ್ವರಪ್ಪ ಅವರೇ ಅದನ್ನ ಒಪ್ಪಿಕೊಂಡ್ರು. ನಾವೂ ಜನಪರ ಕಾನೂನು ತಂದ್ರೆ ಅವ್ರು ಜನ ವಿರೋಧಿ ಕಾನೂನು ತರ್ತಾರೆ. ಕಾಂಗ್ರೆಸ್ ನವರದ್ದು ಜನಪರವಾದ ಸಿದ್ಧಾಂತ. ನಾವೂ ಜನರನ್ನ ಸೇರಿಸಿದ್ರೆ, ಬಿಜೆಪಿಯವರು ಜನರನ್ನು ಬೇರ್ಪಡಿಸುವ ಕೆಲಸ ಮಾಡ್ತಾರೆ.
ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಅಜೆಂಡಾ. ಬಿಜೆಪಿ ಸರ್ಕಾರ ಆರ್ ಎಸ್ ಎಸ್ ಹೇಳಿದಂತೆ ಅದನ್ನ ಜಾರಿಗೆ ತಂದಿದೆ ಅಷ್ಟೆ.
ನಾನು ಅಧಿಕಾರದಲ್ಲಿದ್ದಾಗ ಇದನ್ನ ತಂದಿದ್ದು ಅಂತಾರೆ. ಆದ್ರೆ ಇದನ್ನ ಬರೆದವರೇ ಆರ್ ಎಸ್ ಎಸ್ ನವರು. ನಾನು ಸಚಿವನಾಗಿದ್ದ ಆಂಜನೇಯನಿಗೂ ಹೇಳಿದ್ದೇ ಇದನ್ನ ಮುಗಿಸಲು. ಈ ಬಿಲ್ ತಂದಿದ್ದು ಯಡಿಯೂರಪ್ಪ ಸರ್ಕಾರವಿದ್ದಾಗ. ಸದನದಲ್ಲಿ ಅದನ್ನ ಹೇಳಿದಾಗ ಯಡಿಯೂರಪ್ಪ ಕೂಡ ಒಪ್ಪಿಕೊಂಡರು ಎಂದಿದ್ದಾರೆ.