Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾಳೆ ಸಿಗಂಧೂರು ಬ್ರಿಡ್ಜ್ ಉದ್ಘಾಟನೆ : ಅದಕ್ಕೆ ಖರ್ಚಾಗಿರೋದು ಎಷ್ಟು ಕೋಟಿ, ಅದರ ವಿಶೇಷತೆಗಳ ಮಾಹಿತಿ ಇಲ್ಲಿದೆ..!

---Advertisement---

ಶಿವಮೊಗ್ಗ: ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಿಗಂಧೂರು ಬ್ರಿಡ್ಜ್ ಉದ್ಘಾಟನೆಗೆ ರೆಡಿಯಾಗಿದೆ. ನಾಳೆ ಸೇತುವೆ ಉದ್ಘಾಟನೆಯಾಗಲಿದ್ದು, ಪ್ರವಾಸಿಗರಂತೂ ಕಾಯ್ತಾ ಇದ್ದಾರೆ. ಈ ಸೇತುವೆ ಕೇಬಲ್ ಸೇತುವೆಯಾಗಿದೆ. ಇದನ್ನು ಸಿದ್ಧ ಮಾಡುವುದಕ್ಕೆ ಸುಮಾರು 473 ಕೋಟಿ ಖರ್ಚು ಮಾಡಲಾಗಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ನಾಳೆ ಈ ಸೇತುವೆಯನ್ನ ಉದ್ಘಾಟನೆ ಮಾಡಲಿದ್ದಾರೆ. ಹಾಗೇ ಪ್ರಹ್ಲಾದ್ ಜೋಶಿ ಕೂಡ ಜೊತೆಯಲ್ಲಿರಲಿದ್ದಾರೆ.

ಮೊದಲು ಸಿಗಂಧೂರಿಗೆ ಹೋಗಿ ತಾಯಿ ಚೌಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಮಾಡಿ ಬಳಿಕ ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ ಎನ್ನಲಾಗಿದೆ. ಸೇತುವೆ ಉದ್ಘಾಟನೆ ಮಾಡಿದ ಬಳಿಕ ಸಾಗರದ ನೆಹರೂ ಮೈದಾನದಲ್ಲಿ ದಿಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು ಕೂಡ ಬರುವ ಸಾಧ್ಯತೆ ಇದೆ. ಸಾಗರದ ಜನತೆಯನ್ನುದ್ದೇಶಿಸಿ, ಸಿಗಂಧೂರು ಭಕ್ತರನ್ನುದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಲಿದ್ದಾರೆ.

ಇನ್ನು ಈ ಸೇತುವೆ ನಿರ್ಮಾಣಕ್ಕೆ 473 ಕೋಟಿ ರೂಪಾಯಿ ಖರ್ಚಾಗಿದ್ದು, 2019ರ ಡಿಸೆಂಬರ್‌ನಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು. 2025ರ ಜುಲೈ 14 ರಂದು ಕಾಮಗಾರಿ ಮುಕ್ತಾಯವಾಗಿದೆ. ದಿಲೀಪ್ ಬಿಲ್ಡ್ ಕಾನ್ ಎಂಬ ಏಜೆನ್ಸಿ ಈ ಕಾಮಗಾರಿಯನ್ನು ನಿರ್ವಹಣೆ ಮಾಡಿದೆ.

ಈ ಸೇತುವೆಯ ಉದ್ಧ 2125 ಮೀಟರ್ ಇದೆ. ಹಾಗೇ ಅಗಲ 16 ಮೀಟರ್ ಇದೆ. ಉಕ್ಕಿನ ಕೇಬಲ್ ಅನ್ನ ಬಳಸಲಾಗಿದೆ. ಸಿಗಂಧೂರಿಗೆ ಹೋಗಲು ಈ ಮೊದಲು ಲಾಂಚ್ ಬಳಕೆ ಮಾಡುತ್ತಿದ್ದರು. ಜನ, ವಾಹನವೆಲ್ಲ ಅದರೊಳಗೆ ಹೋಗಬೇಕಿತ್ತು. ಇನ್ಮೇಲೆ ಬ್ರಿಡ್ಜ್ ಮೇಲೆ ಹೋಗಬೇಕು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment