ಚಿತ್ರದುರ್ಗ. ಜುಲೈ.07: ಜುಲೈ 8 ಮಂಗಳವಾರದಂದು ಚಿತ್ರದುರ್ಗ ಆಕಾಶವಾಣಿಯ ಹಲೋ ಆಕಾಶವಾಣಿ ಜನಜಾಗೃತಿ ನೇರ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ರಾಜಶೇಖರ್ ಪಳ್ಳೇದವರ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10 ರಿಂದ 11 ಗಂಟೆಯ ವರೆಗೆ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಚಟುವಟಿಕೆಗಳು, ಆಹಾರ ಉದ್ಯಮದ ನೊಂದಣಿ, ಪರವಾನಿಗೆ ಪಡೆಯುವುದು ಹೇಗೆ? ಆಹಾರ ಉದ್ದಿಮೆದಾರರ ಜವಬ್ದಾರಿಗಳು, ಆಹಾರ ಮಾದರಿ ಪರೀಕ್ಷೆ, ಕಳಪೆ ಗುಣಮಟ್ಟದ ಆಹಾರದ ವಿತರಣೆ ವಿರುದ್ದ ಕಾನೂನು ಶಿಕ್ಷೆಗಳ ಕುರಿತು ಮಾಹಿತಿ ನೀಡಲಿದ್ದಾರೆ.
ಕೇಳುಗರು ಮೊಬೈಲ್ ಸಂಖ್ಯೆಗಳಾದ 9448640273, 9141970272 ಹಾಗೂ ದೂರವಾಣಿ ಸಂಖ್ಯೆ 08194-295649ಗೆ ಕರೆ ಮಾಡಬಹುದು. ವಾಟ್ಸಪ್ ಸಂಖ್ಯೆ 9448640273 ಸಂದೇಶ ಮಾಡುವ ಮೂಲಕವು ಮಾಹಿತಿ ಪಡೆಯಬಹುದು.






